ಬಿಸಿಸಿಐ ಮನವಿ ತಳ್ಳಿ ಹಾಕಿದ ಐಸಿಸಿ

ಬುಧವಾರ, ಮಾರ್ಚ್ 27, 2019
22 °C
ವಿಶ್ವಕಪ್ ಟೂರ್ನಿಯಿಂದ ಪಾಕ್ ಕೈಬಿಢಲು ಆಗ್ರಹಿಸಿದ್ದ ಭಾರತ

ಬಿಸಿಸಿಐ ಮನವಿ ತಳ್ಳಿ ಹಾಕಿದ ಐಸಿಸಿ

Published:
Updated:

ದುಬೈ : ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಕ್ರಿಕೆಟ್ ತಂಡವನ್ನು ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಿಂದ ಹೊರಗೆ ಹಾಕಬೇಕು ಎಂದು ಬಿಸಿಸಿಐ ಮಾಡಿದ್ದ ಮನವಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಳ್ಳಿಹಾಕಿದೆ.

ಇಂಗ್ಲೆಂಡ್‌ನಲ್ಲಿ ಮೇ 30ರಂದು ವಿಶ್ವಕಪ್ ಟೂರ್ನಿ ಆರಂಭವಾಗಲಿದೆ.  ಜೂನ್ 16ರಂದು ಭಾರತ ತಂಡವು ಪಾಕಿಸ್ತಾನವನ್ನು ಎದುರಿಸಲಿದೆ. ಆದರೆ, ಫೆಬ್ರುವರಿ 14ರಂದು ಪುಲ್ವಾಮಾದಲ್ಲಿ ಭಯೋತ್ಪಾದನಾ ದಾಳಿಯಲ್ಲಿ ಸಿಆರ್‌ಪಿಎಫ್‌ ನ 40ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದರು. ಆ ಘಟನೆಯನ್ನು ಖಂಡಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತವು ಪಾಕ್ ವಿರುದ್ಧ ಆಡಬಾರದು ಎಂದು ಹಲವರು ಒತ್ತಾಯಿಸಿದ್ದರು. ಪಾಕ್‌ ತಂಡವನ್ನೇ ಟೂರ್ನಿಯಿಂದ ಹೊರಗೆ ಹಾಕಬೇಕು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಐಸಿಸಿಗೆ ಮನವಿ ಸಲ್ಲಿಸಿತ್ತು. 

‘ಶನಿವಾರ ದುಬೈನಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಬಿಸಿಸಿಐ ಒತ್ತಾಯಿಸಿದಂತೆ ಕ್ರಮ ಕೈಗೊಳ್ಳಲು ಐಸಿಸಿಯಲ್ಲಿ ನಿಯಮವಿಲ್ಲ. ಅದು ಕೌನ್ಸಿಲ್‌ ವ್ಯಾಪ್ತಿಯಲ್ಲಿ ಇಲ್ಲ. ಅದು ಉಭಯ ದೇಶಗಳ ನಡುವಣ ವಿಷಯ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ಇದೇ ರೀತಿಯ ಪ್ರತಿಕ್ರಿಯೆ ಬರಬಹುದು ಎಂದು ನಾವು ಮೊದಲೇ ಅಂದುಕೊಂಡಿದ್ದೆವು. ಆದರೂ ಒಂದು ಛಾನ್ಸ್‌ ತೆಗೆದುಕೊಂಡೆವು’ ಎಂದು ಬಿಸಿಸಿಐ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಹಲವು ದೇಶಗಳ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಆದ್ದರಿಂದ ಬಿಸಿಸಿಐನ ಮನವಿಯನ್ನು ಪುರಸ್ಕರಿಸುವುದು ಸಾಧ್ಯವಿಲ್ಲ. ಭದ್ರತೆಯ ಲೋಪವಾಗದಂತೆ ಎಚ್ಚರ ವಹಿಸುವ ಅಗತ್ಯವಿದೆ. ಅದನ್ನು ನಾವು ನೋಡಿಕೊಳ್ಳುವುದಾಗಿ ಹೇಳಿದ್ದಾರೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !