ಕ್ರಿಕೆಟ್: ಒಶೇನ್ ಬಿರುಗಾಳಿ; ಗೇಲ್ ಪ್ರಹಾರ

ಶುಕ್ರವಾರ, ಏಪ್ರಿಲ್ 19, 2019
22 °C

ಕ್ರಿಕೆಟ್: ಒಶೇನ್ ಬಿರುಗಾಳಿ; ಗೇಲ್ ಪ್ರಹಾರ

Published:
Updated:

ಗ್ರಾಸ್ ಐಲೆಟ್, (ವೆಸ್ಟ್ ಇಂಡೀಸ್): ವೇಗದ ಬೌಲರ್‌ ಒಶೇನ್ ಥಾಮಸ್ (5.1–0–21–5) ಅವರ ಬಿರುಗಾಳಿ ವೇಗದ ಬೌಲಿಂಗ್‌ ಮತ್ತು ಕ್ರಿಸ್‌ ಗೇಲ್ ಸಿಡಿಲಬ್ಬರದ ಬ್ಯಾಟಿಂಗ್‌ಗೆ  ಇಂಗ್ಲೆಂಡ್ ತಂಡವು ತತ್ತರಿಸಿತು.

ಭಾನುವಾರ ಇಲ್ಲಿ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು 7 ವಿಕೆಟ್‌ಗಳಿಂದ ಇಂಗ್ಲೆಂಡ್ ವಿರುದ್ಧ ಜಯಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡದ ಐವರು ಪ್ರಮುಖ ಬ್ಯಾಟ್ಸ್‌ಮನ್‌ಗಳ ವಿಕೆಟ್‌ಗಳನ್ನು ಕಬಳಿಸಿದರು. ಇದರಿಂದಾಗಿ ತಂಡವು 28.1 ಓವರ್‌ಗಳಲ್ಲಿ 113 ರನ್‌ಗಳ ಅಲ್ಪಮೊತ್ತ ಗಳಿಸಿತು.

ಗುರಿ ಬೆನ್ನಟ್ಟಿದ ವಿಂಡೀಸ್‌ ತಂಡದ ಕ್ರಿಸ್‌ ಗೇಲ್ ಕೇವಲ 27 ಎಸೆತಗಳಲ್ಲಿ 77 ರನ್‌ಗಳನ್ನು ಗಳಿಸಿದರು. ಅದರಲ್ಲಿ ಐದು ಬೌಂಡರಿ ಮತ್ತು ಒಂಬತ್ತು ಸಿಕ್ಸರ್‌ಗಳನ್ನು ಬಾರಿಸಿದರು. 285.19ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ರನ್‌ ಗಳಿಸಿದರು.

ತಂಡವು ಕೇವಲ 12.1 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು. ಇದರೊಂದಿಗೆ ಸರಣಿಯಲ್ಲಿ 2–2ರ ಸಮಬಲ ಸಾಧಿಸಿತು. ಥಾಮಸ್ ಪಂದ್ಯಶ್ರೇಷ್ಠ ಮತ್ತು ಕ್ರಿಸ್ ಗೇಲ್ ಸರಣಿ ಶ್ರೇಷ್ಠ ಗೌರವ ಗಳಿಸಿದರು. ಹೋದ ಪಂದ್ಯದಲ್ಲಿ ಗೇಲ್ 97 ಎಸೆತಗಳಲ್ಲಿ 167 ರನ್‌ ಗಳಿಸಿದ್ದರು. ಅದರಲ್ಲಿ 14 ಸಿಕ್ಸರ್ ಮತ್ತು 11 ಬೌಂಡರಿಗಳನ್ನು ಬಾರಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಹತ್ತು ಸಾವಿರ ರನ್‌ ಗಳಿಸಿದವರ ಸಾಲಿಗೆ ಸೇರ್ಪಡೆಯಾಗಿದ್ದರು.

ಸಂಕ್ಷಿಪ್ತ ಸ್ಕೋರು:

ಇಂಗ್ಲೆಂಡ್: 28.1 ಓವರ್‌ಗಳಲ್ಲಿ 113 (ಅಲೆಕ್ಸ್‌ ಹೆಲ್ಸ್ 23, ಜಾಸ್ ಬಟ್ಲರ್ 23, ಬೆನ್ ಸ್ಟೋಕ್ಸ್‌ 15, ಎಯಾನ್ ಮಾರ್ಗನ್ 18,  ಒಶೇನ್ ಥಾಮಸ್ 21ಕ್ಕೆ5, ಕಾರ್ಲೋಸ್ ಬ್ರೇಥ್‌ವೇಟ್ 17ಕ್ಕೆ2, ಜೇಶನ್ ಹೋಲ್ಡರ್ 28ಕ್ಕೆ2) ವೆಸ್ಟ್ ಇಂಡೀಸ್:12.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 115 (ಕ್ರಿಸ್ ಗೇಲ್ 77, ಶಾಯ್ ಹೋಪ್ 13, ಶಿಮ್ರೊನ್ ಹೆಟ್ಮೆಯರ್ ಔಟಾಗದೆ 11, ಮಾರ್ಕ್ ವುಡ್ 55ಕ್ಕೆ2) ಫಲಿತಾಂಶ: ವೆಸ್ಟ್ ಇಂಡೀಸ್‌ಗೆ 7 ವಿಕೆಟ್‌ಗಳ ಜಯ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !