‘ಯೂನಿಸೆಫ್‌ ಗೌರವ ರಾಯಭಾರಿ’ಯಾಗಿ ಪ್ರಿಯಾಂಕಾ ಬೇಡ: ಪಾಕ್‌ನಲ್ಲಿ ಅಭಿಯಾನ

ಸೋಮವಾರ, ಮಾರ್ಚ್ 25, 2019
26 °C

‘ಯೂನಿಸೆಫ್‌ ಗೌರವ ರಾಯಭಾರಿ’ಯಾಗಿ ಪ್ರಿಯಾಂಕಾ ಬೇಡ: ಪಾಕ್‌ನಲ್ಲಿ ಅಭಿಯಾನ

Published:
Updated:
Prajavani

ಮುಂಬೈ : ಯೂನಿಸೆಫ್‌ನ ಗೌರವ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಆ ಸ್ಥಾನದಿಂದ ತೆಗೆದುಹಾಕುವಂತೆ ಒತ್ತಾಯಿಸಿ ಪಾಕಿಸ್ತಾನದಲ್ಲಿ ಆನ್‌ಲೈನ್‌ ಅಭಿಯಾನ ಆರಂಭವಾಗಿದೆ.

ವಿಶ್ವಸಂಸ್ಥೆ ಹಾಗೂ ಯೂನಿಸೆಫ್‌ಗೆ ಟ್ಯಾಗ್‌ ಮಾಡಲಾಗಿರುವ ‘ಆವಾಜ್‌’ ಎಂಬ ಆನ್‌ಲೈನ್‌ ಅಭಿಯಾನಕ್ಕೆ ಈಗಾಗಲೇ 3,519 ಜನರು ಸಹಿ ಹಾಕಿದ್ದಾರೆ.

ಫೆಬ್ರುವರಿ 26ರಂದು ಬಾಲಾಕೋಟ್‌ ಮೇಲೆ ವಾಯಪಡೆ ಜೈಷ್‌–ಎ–ಮೊಹಮ್ಮದ್‌ ಉಗ್ರರ ತಾಣದ ಮೇಲೆ ನಡೆಸಿದ ದಾಳಿ ಬಗ್ಗೆ ಉಲ್ಲೇಖಿಸಿ, ಪ್ರಿಯಾಂಕಾ ಚೋಪ್ರಾ ‘ಜೈ ಹಿಂದ್‌ #ಇಂಡಿಯನ್‌ಆರ್ಮ್‌ಮ್ಡ್‌ಫೋರ್ಸ್‌ಸ್‌’ ಎಂದು ಟ್ವೀಟ್‌ ಮಾಡಿದ್ದರು.

‘ಉಭಯ ದೇಶಗಳ ನಡುವೆ ತ್ವೇಷಮಯ ವಾತಾವರಣ ಇರುವಾಗ ಯೂನಿಸೆಫ್‌ನ ರಾಯಭಾರಿ ಪ್ರಿಯಾಂಕಾ ಚೋಪ್ರಾ ತಟಸ್ಥ ನಿಲುವನ್ನು ಹೊಂದಿರಬೇಕು. ಆದರೆ, ಅವರು ಭಾರತದ ಪರವಾಗಿ ಟ್ವೀಟ್‌ ಮಾಡಿರುವುದು ಸರಿಯಲ್ಲ’ ಎಂದು ಅಭಿಯಾನದಲ್ಲಿ ಸಹಿ ಹಾಕಿರುವವರು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 1

  Sad
 • 0

  Frustrated
 • 9

  Angry

Comments:

0 comments

Write the first review for this !