ಚಿಕ್ಕಬಳ್ಳಾಪುರ: ಮತ್ತೊಂದು ಹೊಸ ರೈಲಿನ ಆಗಮನ

ಶನಿವಾರ, ಮಾರ್ಚ್ 23, 2019
28 °C
ಜಿಲ್ಲೆಯ ಮಾರ್ಗವಾಗಿ ಯಶವಂತಪುರ–ನವದೆಹಲಿ ಸಂಪರ್ಕ ಬೆಸೆಯುವ ನೂತನ ರೈಲು ಸೇವೆಗೆ ಮಂಗಳವಾರ ಚಾಲನೆ, ತಿರುಪತಿ ದರ್ಶನ ಇನ್ನು ಸುಲಭ

ಚಿಕ್ಕಬಳ್ಳಾಪುರ: ಮತ್ತೊಂದು ಹೊಸ ರೈಲಿನ ಆಗಮನ

Published:
Updated:
Prajavani

ಚಿಕ್ಕಬಳ್ಳಾಪುರ: ಇತ್ತೀಚೆಗಷ್ಟೇ ಯಶವಂತಪುರ–ದೇವನಹಳ್ಳಿ ಡೆಮು ರೈಲಿನ ಸೇವೆ ಚಿಕ್ಕಬಳ್ಳಾಪುರ ವರೆಗೆ ವಿಸ್ತರಣೆಗೊಂಡ ಬೆನ್ನಲ್ಲೇ, ಮಂಗಳವಾರದಿಂದ (ಮಾ.5) ಹೊಸದಾಗಿ ಯಶವಂತಪುರ–ನವದೆಹಲಿ ರೈಲು ಜಿಲ್ಲೆಯ ಮಾರ್ಗವಾಗಿ ಸಂಚಾರ ಆರಂಭಿಸುತ್ತಿರುವುದು ಜಿಲ್ಲೆಯ ರೈಲ್ವೆ ಪ್ರಯಾಣಿಕರಲ್ಲಿ ಸಂತಸ ತಂದಿದೆ.

ಯಶವಂತಪುರದಿಂದ ಹೊರಟು ಕೋಲಾರ, ಚಿಕ್ಕಬಳ್ಳಾಪುರ, ಬಂಗಾರಪೇಟೆ ಮಾರ್ಗವಾಗಿ ದೆಹಲಿಗೆ ಸಂಚರಿಸುವ ರೈಲಿಗೆ ಮಂಗಳವಾರ ಬೆಳಿಗ್ಗೆ 10.30ಕ್ಕೆ ಯಶವಂತಪುರ ರೈಲು ನಿಲ್ದಾಣದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ. ಈ ರೈಲು ಚಿಕ್ಕಬಳ್ಳಾಪುರ ನಿಲ್ದಾಣಕ್ಕೆ ಮಧ್ಯಾಹ್ನ 1.30ಕ್ಕೆ ತಲುಪಲಿದ್ದು, ರೈಲ್ವೆ ಹೋರಾಟ ಸಮಿತಿ ಮತ್ತು ಸಲಹಾ ಸಮಿತಿ ಸದಸ್ಯರು ನೂತನ ರೈಲು ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಈ ರೈಲು ಯಲಹಂಕ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಬಂಗಾರಪೇಟೆ, ಕಟಾಪಡಿ, ರೇಣುಗುಂಟು, ತಿರುಪತಿ, ವಿಜಯವಾಡ ಅಲ್ಲಿಂದ ಮಹಾರಾಷ್ಟ್ರದ ನಾಗಪುರ ಮೂಲಕ ದೆಹಲಿಗೆ ತಲುಪಲಿದೆ. ಈ ರೈಲಿನಿಂದಾಗಿ ಇದೇ ಮೊದಲ ಬಾರಿಗೆ ಜಿಲ್ಲೆಯ ಜನರು ನೆರೆಯ ಆಂಧ್ರಪ್ರದೇಶವನ್ನು ರೈಲಿನ ಮೂಲಕ ಸಂಪರ್ಕಿಸುವಂತಾಗಿದೆ. ಜತೆಗೆ ಇನ್ನು ಮುಂದೆ ರೈಲಿನಲ್ಲಿ ತಿರುಪತಿ ತಿಮ್ಮಪ್ಪನ ದರ್ಶಕ್ಕೆ, ಉತ್ತರ ಭಾರತದತ್ತ ಪ್ರಯಾಣ ಬೆಳೆಸಬಹುದಾಗಿದೆ.

ನ್ಯಾರೋಗೇಜ್ ಕಾರಣಕ್ಕೆ ಅನೇಕ ದಶಕಗಳ ಕಾಲ ರೈಲು ಸೇವೆಯಿಂದ ವಂಚಿತಗೊಂಡಿದ್ದ ಜಿಲ್ಲೆಗೆ 2013ರಲ್ಲಿ ನ್ಯಾರೋಗೇಜ್‌ ಬ್ರಾಡ್‌ಗೇಜ್ ಮಾರ್ಗವಾಗಿ ಪರಿರ್ವತನೆಗೊಳ್ಳುವ ಮೂಲಕ ಬೆಂಗಳೂರು–ಚಿಕ್ಕಬಳ್ಳಾಪುರ–ಕೋಲಾರ ಪ್ಯಾಸೆಂಜರ್‌ ರೈಲು ಸೇವೆಗೆ ಚಾಲನೆ ದೊರೆತಿತ್ತು. ಎರಡನೇ ಹಂತದಲ್ಲಿ ಯಶವಂತಪುರ–ದೇವನಹಳ್ಳಿ ಡೆಮು ರೈಲಿನ ಸೇವೆ ವಿಸ್ತರಣೆಗೊಂಡಿತು. ಇದೀಗ ಮುಂದುವರಿದು ದೆಹಲಿ ಸಂಪರ್ಕಿಸುವ ಎಕ್ಸ್‌ಪ್ರೆಸ್‌ ರೈಲಿನ ಸೇವೆ ದೊರಕುತ್ತಿರುವುದು ಪ್ರಯಾಣಿಕರಲ್ಲಿ ಸಹಜವಾಗಿಯೇ ಸಂತಸ ನೂರ್ಮಡಿಗೊಳಿಸಿದೆ.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !