ಗೋಲು ಹೊಡೆದ ಸಾವಿಗೀಡಾದ ಆಟಗಾರ

ಬುಧವಾರ, ಮಾರ್ಚ್ 27, 2019
22 °C

ಗೋಲು ಹೊಡೆದ ಸಾವಿಗೀಡಾದ ಆಟಗಾರ

Published:
Updated:

ಲಿಬ್ರೆವಿಲೆ, ಸೆಂಟ್ರಲ್ ಆಫ್ರಿಕಾ: ಪಂದ್ಯದ ಮಧ್ಯೆ ಅಂಗಣದಲ್ಲೇ ಕುಸಿದು ಬಿದ್ದು ಫುಟ್‌ಬಾಲ್ ಆಟಗಾರ ಹರ್ಮನ್ ತಿಂಗಾ ಸೋಮವಾರ ಸಾವಿಗೀಡಾಗಿದ್ದಾರೆ. ಗಾಬೊನಿ ಪ್ರಥಮ ಡಿವಿಷನ್‌ ಟೂರ್ನಿಯಲ್ಲಿ  ಮಿಸಿಲಿ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಅಕಾಂಡ ಎಫ್‌ಸಿ ಪರ ಕಣಕ್ಕೆ ಇಳಿದಿದ್ದ ತಿಂಗಾ 23ನೇ ನಿಮಿಷದಲ್ಲಿ ಕುಸಿದು ಬಿದ್ದರು ಎಂದು ಯೂನಿಯನ್ ಡೈಲಿ ಪತ್ರಿಕೆ ವರದಿ ಮಾಡಿದೆ.

ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿಮಧ್ಯೆ ಕೊನೆಯುಸಿರೆಳೆದರು. ಅವರನ್ನು ಕರೆದುಕೊಂಡು ಹೋದ ಅಂಬುಲೆನ್ಸ್‌ನಲ್ಲಿ ಆಮ್ಲಜನಕ ಪೂರೈಕೆಗೆ ಸೂಕ್ತ ವ್ಯವಸ್ಥೆ ಇರಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ಗಾಬೊನಿಯಲ್ಲಿ ಈ ಹಿಂದೆಯೂ ಒಟ್ಟು 11 ಮಂದಿ ಆಟಗಾರರು ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪತ್ರಿಕೆ ಮಾಹಿತಿ ನೀಡಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 4

    Sad
  • 0

    Frustrated
  • 0

    Angry

Comments:

0 comments

Write the first review for this !