ಬೇಡಿಕೆಗಳ ಈಡೇರಿಕೆಗೆ ಕ್ರಷರ್ ಮಾಲೀಕರ ಆಗ್ರಹ

ಗುರುವಾರ , ಮಾರ್ಚ್ 21, 2019
32 °C

ಬೇಡಿಕೆಗಳ ಈಡೇರಿಕೆಗೆ ಕ್ರಷರ್ ಮಾಲೀಕರ ಆಗ್ರಹ

Published:
Updated:
Prajavani

ಚಿಕ್ಕಬಳ್ಳಾಪುರ: ತಮ್ಮ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಕ್ರಷರ್ ಮತ್ತು ಕ್ವಾರಿ ಮಾಲಿಕರ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಗುಡಿಬಂಡೆ ನಾಗರಾಜ್, ‘ಕಲ್ಲು ಗಣಿ ಗುತ್ತಿಗೆದಾರರು ಮತ್ತು ಕ್ರಷರ್‌ ಮಾಲೀಕರು ಕ್ರಷರ್ ಸ್ಥಾಪಿಸಲು ದೊಡ್ಡ ಪ್ರಮಾಣದ ಬಂಡವಾಳ ಹೂಡಿರುತ್ತಾರೆ. ಆದ್ದರಿಂದ ಕ್ರಷರ್ ಅನುಮತಿಯನ್ನು ಐದು ವರ್ಷಗಳಿಂದ 20 ವರ್ಷಕ್ಕೆ ಹೆಚ್ಚಳ ಮಾಡಬೇಕು’ ಎಂದು ಆಗ್ರಹಿಸಿದರು.

‘ಕ್ರಷರ್ ಸುರಕ್ಷಿತ ವಲಯ ಘೋಷಣೆಗೆ ಸಂಬಂಧಿಸಿದಂತೆ ರಾಜ್ಯ ಕಲ್ಲು ಪುಡಿ ಮಾಡುವ ಘಟಕಗಳ ನಿಯಂತ್ರಣ ಅಧಿನಿಯಮ 2011ರ ಇತರೆ ರಸ್ತೆ ಎಂಬುದರ ಬಗ್ಗೆ ಸೂಕ್ತ ವ್ಯಾಖ್ಯಾನ ಇಲ್ಲ. ಆದ್ದರಿಂದ ಈ ಬಗ್ಗೆ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರ್ಯದರ್ಶಿಗಳು ಸೂಕ್ತಕ್ರಮ ತೆಗೆದುಕೊಳ್ಳಬೇಕು’ ಎಂದು ಹೇಳಿದರು.

ಕ್ರಷರ್ ಮಾಲಿಕರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ನರೇಂದ್ರ ಕುಮಾರ್, ಕ್ರಷರ್ ಮಾಲಿಕರಾದ ಮಧುಸೂಧನ್, ಜೆ.ಪಿ ಪ್ರಕಾಶ್, ಗಜೇಂದ್ರಬಾಬು, ಪಂಚಮಿ ಶ್ರೀನಿವಾಸ್, ಭಾನುಪ್ರಕಾಶ್, ನಿಖಿಲ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !