ನಾಲ್ಕು ಸಾವಿರ ರನ್ ಸರದಾರ ಕೊಹ್ಲಿ

ಶನಿವಾರ, ಮಾರ್ಚ್ 23, 2019
24 °C

ನಾಲ್ಕು ಸಾವಿರ ರನ್ ಸರದಾರ ಕೊಹ್ಲಿ

Published:
Updated:

ರಾಂಚಿ: ವಿರಾಟ್ ಕೊಹ್ಲಿ ಶುಕ್ರವಾರ ಏಕದಿನ ಕ್ರಿಕೆಟ್‌ನಲ್ಲಿ  ವೇಗವಾಗಿ ನಾಲ್ಕು ಸಾವಿರ ರನ್ ಗಳಿಸಿದ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾದರು.

ಇಲ್ಲಿಯ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್‌ಸಿಎ) ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾ ಎದುರು ಶತಕ ದಾಖಲಿಸಿದರು.

ಅವರು ನಾಯಕತ್ವ ವಹಿಸಿಕೊಂಡ ನಂತರದ 63 ಇನಿಂಗ್ಸ್‌ಗಳಲ್ಲಿ ನಾಲ್ಕುಸಾವಿರ ರನ್ ಗಳಿಸಿದರು. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಅವರು 77 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.

ನಾಲ್ಕು ಸಾವಿರ ರನ್ ಗಳಿಸಿದ ಭಾರತ ತಂಡದ ನಾಲ್ಕನೇ ನಾಯಕರೆಂಬ ಶ್ರೇಯವೂ ಅವರದ್ದಾಯಿತು. ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ ಮತ್ತು ಮಹೇಂದ್ರಸಿಂಗ್ ಧೋನಿ ಈ ಮೊದಲು ಸಾಧನೆ ಮಾಡಿದ್ದರು.

ಫಿಂಚ್–ಉಸ್ಮಾನ್ ದಾಖಲೆ: ಆಸ್ಟ್ರೇಲಿಯಾದ ಆ್ಯರನ್ ಫಿಂಚ್ ಮತ್ತು ಉಸ್ಮಾನ್ ಖ್ವಾಜಾ ಅವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ ಸೇರಿಸಿದ 193 ರನ್‌ಗಳು ದಾಖಲೆ ಪುಟ ಸೇರಿದವು.

ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಮೊದಲ ವಿಕೆಟ್‌ ಜೊತೆಯಾಟದಲ್ಲಿ ಸೇರಿದ ಅತ್ಯಧಿಕ ಮೊತ್ತವಿದು. 2013ರಲ್ಲಿ ಆಸ್ಟ್ರೇಲಿಯಾದ  ಜಾರ್ಜ್ ಬೇಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರು 153 ರನ್‌ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಆದರೆ  ಆ ಪಂದ್ಯದಲ್ಲಿ ಫಲಿತಾಂಶ ಹೊರಹೊಮ್ಮಿರಲಿಲ್ಲ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !