ಕ್ರಿಕೆಟಿಗ ಲಕ್ಷ್ಮಣ್ ನಿಧನ

ಶುಕ್ರವಾರ, ಮಾರ್ಚ್ 22, 2019
21 °C

ಕ್ರಿಕೆಟಿಗ ಲಕ್ಷ್ಮಣ್ ನಿಧನ

Published:
Updated:

ಬೆಂಗಳೂರು: ರಾಜ್ಯ ತಂಡದ ಹಿರಿಯ ಆಟಗಾರ ಕೆ. ಲಕ್ಷ್ಮಣ್ (81) ಅವರು ಗುರುವಾರ ನಿಧನರಾದರು. ಅವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ.

ಎಡಗೈ ಸ್ಪಿನ್ನರ್ ಆಗಿದ್ದ ಅವರು 1973 ರಿಂದ 1975ರ ಅವಧಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ರಣಜಿ ಟ್ರೋಫಿ ಟೂರ್ನಿಯಲ್ಲಿ ಪ್ರತಿನಿಧಿಸಿದ್ದರು. ಒಟ್ಟು 10 ರಣಜಿ ಪಂದ್ಯಗಳಲ್ಲಿ  ಆಡಿದ್ದರು. 1973–74ರಲ್ಲಿ ಕರ್ನಾಟಕ ತಂಡವು ಮೊದಲ ಬಾರಿ ರಣಜಿ ಟ್ರೋಫಿ ಗೆದ್ದಾಗ ಅವರು ತಂಡದಲ್ಲಿದ್ದರು.  ಆಟದಿಂದ ನಿವೃತ್ತರಾದ ನಂತರ ರಾಜ್ಯ ಜೂನಿಯರ್ ತಂಡಗಳ ಆಯ್ಕೆಗಾರ ಮತ್ತು ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !