ಜೆಡಿಎಸ್ ಚಿಹ್ನೆಯಿಂದ ಮಹಿಳೆ ಚಿತ್ರ ತೆಗೆಯಲಿ: ರೇವಣ್ಣಗೆ ಶಾಸಕ ಈಶ್ವರಪ್ಪ ಆಗ್ರಹ

ಮಂಗಳವಾರ, ಮಾರ್ಚ್ 26, 2019
33 °C

ಜೆಡಿಎಸ್ ಚಿಹ್ನೆಯಿಂದ ಮಹಿಳೆ ಚಿತ್ರ ತೆಗೆಯಲಿ: ರೇವಣ್ಣಗೆ ಶಾಸಕ ಈಶ್ವರಪ್ಪ ಆಗ್ರಹ

Published:
Updated:

ಬಾಗಲಕೋಟೆ: ‘ಸುಮಲತಾ ಬಗ್ಗೆ ಹಗುರವಾಗಿ ಮಾತಾಡಿರುವ ಸಚಿವ ಎಚ್.ಡಿ.ರೇವಣ್ಣ ಇಡೀ ಮಹಿಳಾ ಕುಲವನ್ನೇ ಅಪಮಾನಿಸಿದ್ದಾರೆ. ಅವರು ಕ್ಷಮೆಯಾಚಿಸಲಿ ಇಲ್ಲವೇ ಜೆಡಿಎಸ್ ಪಕ್ಷದ ಚಿಹ್ನೆಯಿಂದ ಹೊರೆ ಹೊತ್ತ ಮಹಿಳೆ ಚಿತ್ರವನ್ನು ಕಿತ್ತು ಹಾಕಲಿ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

‘ಸುಮಲತಾ ಕಣ್ಣೀರು ಹಾಕುತ್ತಿರುವುದಕ್ಕೆ ಇಡೀ ರಾಜ್ಯವೇ ಮರುಗುತ್ತಿದೆ. ರೇವಣ್ಣ ಕ್ಷಮೆ ಕೇಳದಿದ್ದರೆ ಜೆಡಿಎಸ್ ಪಕ್ಷದ ಚಿಹ್ನೆಯಲ್ಲಿ ಹೊರೆ ಹೊತ್ತ ಮಹಿಳೆ ಚಿತ್ರ ಬಳಸಿಕೊಳ್ಳುವ ಅರ್ಹತೆ ದೇವೇಗೌಡರು ಕಳೆದುಕೊಳ್ಳಲಿದ್ದಾರೆ’ ಎಂದು ಶನಿವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದಿರುವ ದೇವೇಗೌಡರು ಈಗ ಒಕ್ಕಲಿಗರ ನಾಯಕನಾಗಿ ಉಳಿದಿಲ್ಲ. ಅವರಿಗೆ 28 ಮಕ್ಕಳು ಇದ್ದರೆ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೂ ನಿಲ್ಲಿಸುತ್ತಿದ್ದರು. ಕೊನೆಗೆ 14 ಮಂದಿ ಮಕ್ಕಳಿದ್ದರೂ 14 ಸೊಸೆಯರನ್ನು ಸೇರಿಸಿ ಚುನಾವಣೆಗೆ ನಿಲ್ಲಿಸುತ್ತಿದ್ದರು’ ಎಂದು ವ್ಯಂಗ್ಯವಾಡಿದ ಈಶ್ವರಪ್ಪ, ‘38 ಸೀಟು ಗೆದ್ದರೂ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗೋದು ಕೆಲವರ ಹಣೆಯಲ್ಲಿ ಬರೆದಿರುತ್ತೆ. ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ’ ಕಟಕಿದರು.

ಇದನ್ನೂ ಓದಿ... ಗಂಡ ಸತ್ತು ಒಂದೆರಡು ತಿಂಗಳಾಗಿಲ್ಲ, ಸುಮಲತಾಗೆ ಯಾಕೆ‌ ಬೇಕಿತ್ತು ರಾಜಕೀಯ: ರೇವಣ್ಣ

‘ಚಾಮುಂಡೇಶ್ವರಿ ಚುನಾವಣೆಯಲ್ಲಿ ಸೋತ ಬಳಿಕ ಸಿದ್ದರಾಮಯ್ಯ ಹತಾಶರಾಗಿದ್ದಾರೆ. ಅವರಿಗೆ ತಿಲಕ, ಸೀರೆ, ಬಳೆಯಲ್ಲೂ ಬಿಜೆಪಿ ಕಾಣುತ್ತಿದೆ. ಕನಕದಾಸ, ಸಂಗೊಳ್ಳಿ ರಾಯಣ್ಣ ಕೂಡ ಬಹಳ ಚೆಂದವಾಗಿ ಕುಂಕುಮ ಹಚ್ಚಿಕೊಳ್ತಿದ್ರು. ಸಿದ್ದರಾಮಯ್ಯ ಹೇಳಿಕೆ ಅವರಿಗೂ ಅಪಮಾನ ಮಾಡಿದಂತಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ನನ್ನ ಬಗ್ಗೆ ಹಗುರವಾಗಿ ಮಾತಾಡುವ ಸಿದ್ದರಾಮಯ್ಯ ತಾಕತ್ತಿದ್ದರೆ ರಾಜೀನಾಮೆ ಕೊಟ್ಟು ಬಾದಾಮಿ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಲಿ. ನಾನು ಶಿವಮೊಗ್ಗ ಕ್ಷೇತ್ರದಲ್ಲಿ ರಾಜೀನಾಮೆ ಕೊಟ್ಟು ಮತ್ತೆ ಸ್ಪರ್ಧಿಸುವೆ. ಅವರು ಬಾದಾಮಿಯಲ್ಲಿ ಮತ್ತೆ ಗೆದ್ದಲ್ಲಿ, ಶಿವಮೊಗ್ಗದಲ್ಲಿ ನಾನು ಸೋತಲ್ಲಿ ರಾಜಕೀಯ ಸನ್ಯಾಸ ಸ್ವೀಕರಿಸುವೆ’ ಎಂದು ಈಶ್ವರಪ್ಪ ಸವಾಲು ಹಾಕಿದರು.

ಇವನ್ನೂ ಓದಿ...

*  ಹಿಂದೂ ಸಂಸ್ಕೃತಿ ಅನ್ವಯಿಸಿ ಹೇಳಿಕೆ ನೀಡಿದ್ದೇನೆ: ರೇವಣ್ಣ ಸಮರ್ಥನೆ 

ಏಳು ಕ್ಷೇತ್ರಗಳಿಗೆ ಒಪ್ಪಿಗೆ ಸೂಚಿಸಿದ ಜೆಡಿಎಸ್‌

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !