ತಂದೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಾಗಲಕೋಟೆಯ ಜಿಲ್ಲಾಧಿಕಾರಿ!

ಮಂಗಳವಾರ, ಮಾರ್ಚ್ 26, 2019
31 °C

ತಂದೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಾಗಲಕೋಟೆಯ ಜಿಲ್ಲಾಧಿಕಾರಿ!

Published:
Updated:
Prajavani

ಬಾಗಲಕೋಟೆ: ಕಿವಿ ನೋವು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ತಮ್ಮ ತಂದೆ ರಾಮಸ್ವಾಮಿ ಅವರನ್ನು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಭಾನುವಾರ ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಕರೆದೊಯ್ದರು.

ಸಾಮಾನ್ಯ ರೋಗಿಗಳ ರೀತಿ ಸಾಲಿನಲ್ಲಿ ನಿಂತು ಹೆಸರು ನೋಂದಾಯಿಸಿ ಪ್ರವೇಶ ಚೀಟಿ ಮಾಡಿಸಿದರು. ನಂತರ ಡಾ.ಗಿರೀಶ ಬಿ. ಸಂಗಮ್ ಹಾಗೂ ಡಾ.ಶಿವನಗೌಡ ಪಾಟೀಲ ಅವರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಈ ಸರಳತೆಗೆ ಆಸ್ಪತ್ರೆಗೆ ಬಂದವರಲ್ಲಿ ಮೆಚ್ಚುಗೆಗೆ ಕಾರಣವಾಯಿತು.  ಸುದ್ದಿ ತಿಳಿದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಬಂದು ರಾಮಚಂದ್ರನ್ ಅವರನ್ನು ಸ್ವಾಗತಿಸಿದರು.

ನಂತರ ಇದಕ್ಕೆ ಪ್ರತಿಕ್ರಿಯಿಸಿದ ರಾಮಚಂದ್ರನ್, ‘ಇದನ್ನು ಸರಳತೆ ಎನ್ನುವುದಕ್ಕಿಂತ ಹೀಗೆ ಮಾಡಿದರೆ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಹಿರಿಯ ಅಧಿಕಾರಿಗಳು ಬಂದು ಹೋದರೆ, ಇಲ್ಲಿ ಚಿಕಿತ್ಸೆ ಪಡೆದರೆ ಆಸ್ಪತ್ರೆಯ ಬಗ್ಗೆಯೂ ಸಾರ್ವಜನಿಕರಿಗೆ ನಂಬಿಕೆ ಬರುತ್ತದೆ. ಜೊತೆಗೆ ಇಲ್ಲಿನ ಅವ್ಯವಸ್ಥೆಗಳ ನಿವಾರಣೆಗೂ ನೆರವಾಗುತ್ತದೆ. ಹೀಗೆ ದಿಢೀರನೆ ಬಂದಾಗ ನಮಗೂ ಇಲ್ಲಿನ ಸೇವೆಯ ವಾಸ್ತವ ಚಿತ್ರಣ ದೊರೆಯುತ್ತದೆ. ಏನಾದರೂ ಸಮಸ್ಯೆಗಳಿದ್ದರೆ ಅದನ್ನು ಹೇಳಿಕೊಳ್ಳಲು ಆಸ್ಪತ್ರೆಗೆ ಬಂದವರಿಗೂ ಅವಕಾಶವಾಗುತ್ತದೆ. ಅದರ ಆಧಾರದ ಮೇಲೆ ಸೌಲಭ್ಯಗಳ ಹೆಚ್ಚಳಕ್ಕೂ ನೆರವಾಗುತ್ತದೆ’ ಎಂದರು.

‘ಇದೊಂದು ಸಾಮಾನ್ಯ ತಪಾಸಣೆ. ಅಲರ್ಜಿ ಕಾರಣ ರಾಮಸ್ವಾಮಿ ಅವರಿಗೆ ಕೆಮ್ಮು, ಕಫ ಇತ್ತು. ಚಿಕಿತ್ಸೆ ನೀಡಿದ್ದೇವೆ’ ಎಂದು ಡಾ.ಗಿರೀಶ ಸಂಗಮ್ ‘ಪ್ರಜಾವಾಣಿ’ಗೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 14

  Happy
 • 2

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !