ನ್ಯೂಜಿಲೆಂಡ್–ಬಾಂಗ್ಲಾ ಕ್ರಿಕೆಟ್ ಟೆಸ್ಟ್: ಒಂದೇ ದಿನ 12 ವಿಕೆಟ್ ಪತನ

ಶನಿವಾರ, ಮಾರ್ಚ್ 23, 2019
24 °C
ನೀಲ್, ಟ್ರೆಂಟ್ ಮಿಂಚು

ನ್ಯೂಜಿಲೆಂಡ್–ಬಾಂಗ್ಲಾ ಕ್ರಿಕೆಟ್ ಟೆಸ್ಟ್: ಒಂದೇ ದಿನ 12 ವಿಕೆಟ್ ಪತನ

Published:
Updated:
Prajavani

ವೆಲ್ಲಿಂಗ್ಟನ್: ಆತಿಥೇಯ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳ ನಡುವಣದ ಟೆಸ್ಟ್ ಪಂದ್ಯದ ಮೊದಲ ಎರಡು ದಿನಗಳು ಮಳೆಗೆ ಆಹುತಿಯಾದವು. ಆದರೆ ಮೂರನೇ ದಿನವಾದ ಭಾನುವಾರ ನಡೆದ ಆಟದಲ್ಲಿ 12 ವಿಕೆಟ್‌ಗಳು ಪತನವಾದವು.

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಂಡವು  ಆತಿಥೇಯ ಬಳಗದ ಟ್ರೆಂಟ್ ಬೌಲ್ಟ್ (38ಕ್ಕೆ3) ಮತ್ತು ನೀಲ್ ವಾಗ್ನರ್ (28ಕ್ಕೆ4)  ಅವರ ದಾಳಿಯಿಂದಾಗಿ 211 ರನ್‌ಗಳ ಅಲ್ಪಮೊತ್ತಕ್ಕೆ ಕುಸಿಯಿತು. ಆರಂಭಿಕ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ (74; 114ಎಸೆತ, 158ನಿಮಿಷ, 10ಬೌಂಡರಿ) ಅವರೊಬ್ಬರೇ ಅರ್ಧಶತಕ ಹೊಡೆದರು.

ಇನಿಂಗ್ಸ್‌ ಆರಂಭಿಸಿದ ಕಿವೀಸ್ ಬಳಗಕ್ಕೆ ಬಾಂಗ್ಲಾದ  ಬೌಲರ್ ಅಬು ಜಯೇದ್ (18ಕ್ಕೆ2) ಪೆಟ್ಟು ನೀಡಿದರು. ಇದರಿಂದಾಗಿ ಆರಂಭಿಕ ಜೋಡಿಯು ಬೇಗನೆ ಪೆವಿಲಿಯನ್‌ಗೆ ಮರಳಿತು. ನಾಯಕ ಕೇನ್ ವಿಲಿಯಮ್ಸನ್ ಮತ್ತು  ರಾಸ್ ಟೇಲರ್ ಕ್ರೀಸ್‌ನಲ್ಲಿದ್ದಾರೆ. ತಂಡವು ದಿನದಾಟದ ಕೊನೆಗೆ 11.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 38 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರ್
ಮೊದಲ ಇನಿಂಗ್ಸ್: ಬಾಂಗ್ಲಾದೇಶ:
61 ಓವರ್‌ಗಳಲ್ಲಿ 211 (ತಮೀಮ್ ಇಕ್ಬಾಲ್ 74, ಶಾದಮನ್ ಇಸ್ಲಾಂ 27, ಮೊಮಿನುಲ್ ಹಕ್ 15, ಸೌಮ್ಯ ಸರ್ಕಾರ್ 20, ಮೆಹಮುದುಲ್ಲಾ 13, ಲಿಟನ್ ದಾಸ್ 33, ಟ್ರೆಂಟ್ ಬೌಲ್ಟ್ 38ಕ್ಕೆ3, ಟಿಮ್ ಸೌಥಿ 52ಕ್ಕೆ1, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 15ಕ್ಕೆ1, ಮ್ಯಾಟ್ ಹೆನ್ರಿ 67ಕ್ಕೆ1, ನೀಲ್ ವ್ಯಾಗ್ನರ್ 28ಕ್ಕೆ4). ನ್ಯೂಜಿಲೆಂಡ್: 11.4 ಓವರ್‌ಗಳಲ್ಲಿ 2ಕ್ಕೆ38 (ಜೀತ್ ರಾವಳ್ 03, ಟಾಮ್ ಲಥಾಮ್ 04. ಕೇನ್ ವಿಲಿಯಮ್ಸನ್ ಬ್ಯಾಟಿಂಗ್ 10, ರಾಸ್ ಟೇಲರ್ ಬ್ಯಾಟಿಂಗ್ 19, ಅಬು ಜಯೇದ್ 18ಕ್ಕೆ2) –ಮೂರನೇ ದಿನದಾಟದ ಅಂತ್ಯಕ್ಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !