19 ವರ್ಷದೊಳಗಿನವರ ಚತುಷ್ಕೋನ ಟೂರ್ನಿ ಕ್ರಿಕೆಟ್: ಭಾರತ ‘ಬಿ’ ತಂಡಕ್ಕೆ ಜಯ

ಶುಕ್ರವಾರ, ಮಾರ್ಚ್ 22, 2019
21 °C

19 ವರ್ಷದೊಳಗಿನವರ ಚತುಷ್ಕೋನ ಟೂರ್ನಿ ಕ್ರಿಕೆಟ್: ಭಾರತ ‘ಬಿ’ ತಂಡಕ್ಕೆ ಜಯ

Published:
Updated:

ತಿರುವನಂತಪುರ: ರಾಹುಲ್ ಚಂದ್ರೊಲ್ (70 ರನ್) ಅವರ ಅರ್ಧಶತಕ ಮತ್ತು  ಸುಶಾಂತ್ ಮಿಶ್ರಾ (41ಕ್ಕೆ4) ಅವರ ಉತ್ತಮ ಬೌಲಿಂಗ್ ಬಲದಿಂದ 19 ವರ್ಷದೊಳಗಿನವರ ಭಾರತ ‘ಬಿ’ ತಂಡವು ಇಲ್ಲಿ ನಡೆಯುತ್ತಿರುವ ಏಕದಿನ ಮಾದರಿ ಚತುಷ್ಕೋನ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತು.

ಸೋಮವಾರ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಬಿ ತಂಡವು 72 ರನ್‌ಗಳಿಂದ ಭಾರತ ‘ಎ’ ತಂಡವನ್ನು ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಬಿ ತಂಡವು ರಾಹುಲ್ ಮತ್ತು ಸಮೀರ್ ರಿಜ್ವಿ (67 ರನ್) ಅವರ ಅರ್ಧಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 232 ರನ್ ಗಳಿಸಿತು. ಗುರಿ ಬೆನ್ನಟ್ಟಿದ ‘ಎ’ ತಂಡವು 38.3 ಓವರ್‌ಗಳಲ್ಲಿ 160 ರನ್‌ ಗಳಿಸಿ ಸೋತಿತು.ತಂಡದಲ್ಲಿರುವ ಕನ್ನಡಿಗ ಶುಭಾಂಗ್ ಹೆಗ್ಡೆ 42 ರನ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಭಾರತ ‘ಬಿ’: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 232 (ರಾಹುಲ್ ಚಂದ್ರೊಲ್ 70, ಸಮೀರ್ ರಿಜ್ವಿ 67, ಕಾರ್ತಿಕ್ ತ್ಯಾಗಿ 33ಕ್ಕೆ3) ಭಾರತ ‘ಎ’ : 38.3 ಓವರ್‌ಗಳಲ್ಲಿ 160 (ಶುಭಾಂಗ್ ಹೆಗ್ಡೆ 42, ಶಾಶ್ವತ್ ರಾವತ್ 27, ಯಶಸ್ವಿ ಜೈಸ್ವಾಲ್ 27, ಸುಶಾಂತ್ ಮಿಶ್ರಾ 41ಕ್ಕೆ4, ಕರಣ್ ಲಾಲ್ 25ಕ್ಕೆ3) ಫಲಿತಾಂಶ: ಭಾರತ ಬಿ ತಂಡಕ್ಕೆ 72 ರನ್‌ಗಳ ಜಯ. ಪ್ರಶಸ್ತಿ.

ಮೂರನೇ ಸ್ಥಾನದ ಪಂದ್ಯ: ದಕ್ಷಿಣ ಆಫ್ರಿಕಾ : 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 231 (ಮ್ಯಾಥ್ಯೂ ಮಾಂಟ್‌ಗೊಮೆರಯ 73, ಬ್ರೈಸ್ ಪಾರ್ಸನ್ಸ್ 44, ಥಾಮ್ಸಂಗ್ ಕುಮಾಲೊ 30) ಅಫ್ಗಾನಿಸ್ತಾನ : 45 ಓವರ್‌ಗಳಲ್ಲಿ 176 (ಇಜಾಜ್ ಅಹಮದ್ ಮೆಹ್ರಾನ ಔಟಾಗದೆ 70, ಕಗುಡೈಸ್ ಮಾಲೆಫೆ 31ಕ್ಕೆ4, ಪಾರ್ಸನ್ಸ್ 30ಕ್ಕೆ2) ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 55 ರನ್‌ಗಳ ಗೆಲುವು.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !