ಕರ್ತವ್ಯಕ್ಕೆ ನಿಯೋಜಿಸಲು ಅಧಿಕಾರಿಗೆ ಲಂಚ?

ಬುಧವಾರ, ಮಾರ್ಚ್ 20, 2019
23 °C
ಟಿ.ವಿ ವಾಹಿನಿಗಳ ಕುಟುಕು ಕಾರ್ಯಾಚರಣೆಯಲ್ಲಿ ಗೃಹ ರಕ್ಷಕ ದಳದ ಜಿಲ್ಲಾ ಉಪ ಕಮಾಡೆಂಟ್‌ ವೆಂಕಟೇಶ್ ಅವರು ಹಣ ಪಡೆಯುವ ದೃಶ್ಯಗಳು ಸೆರೆ

ಕರ್ತವ್ಯಕ್ಕೆ ನಿಯೋಜಿಸಲು ಅಧಿಕಾರಿಗೆ ಲಂಚ?

Published:
Updated:
Prajavani

ಚಿಕ್ಕಬಳ್ಳಾಪುರ: ಕರ್ತವ್ಯಕ್ಕೆ ನಿಯೋಜಿಸಲು ಗೃಹ ರಕ್ಷಕರಿಂದ ಚಿಕ್ಕಬಳ್ಳಾಪುರ ಗೃಹ ರಕ್ಷಕ ದಳದ ಜಿಲ್ಲಾ ಉಪ ಕಮಾಡೆಂಟ್‌ ವೆಂಕಟೇಶ್ ಅವರು ಹಣ ಪಡೆಯುತ್ತಿದ್ದಾರೆ ಎನ್ನಲಾದ ದೃಶ್ಯಾವಳಿಗಳು ಮಂಗಳವಾರ ಕೆಲ ಟಿ.ವಿ ವಾಹಿನಿಗಳಲ್ಲಿ ಪ್ರಸಾರಗೊಂಡವು.

ವಾಹಿನಿಗಳು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕ ದೃಶ್ಯಾವಳಿಯಲ್ಲಿ ಗೃಹ ರಕ್ಷಕರೊಬ್ಬರಿಂದ ವೆಂಕಟೇಶ್ ಅವರು ಹಣ ಪಡೆಯುತ್ತಿದ್ದಾರೆ. ಜತೆಗೆ, ‘ನೀವು ಕೊಡುವ ಹಣ ನಾನೊಬ್ಬನೇ ಮನೆಗೆ ತೆಗೆದುಕೊಂಡು ಹೋಗುವುದಿಲ್ಲ. ಹಿರಿಯ ಅಧಿಕಾರಿಗಳಿಗೂ ಇದರಲ್ಲಿ ಪಾಲು ಹೋಗುತ್ತದೆ’ ಎಂದು ಅವರು ಆ ವಿಡಿಯೊದಲ್ಲಿ ಹೇಳಿರುವುದಾಗಿ ವರದಿಯಾಗಿದೆ.

‘ವೆಂಕಟೆಶ್‌ ಅವರು ಪ್ರತಿಯೊಬ್ಬ ಗೃಹ ರಕ್ಷಕರಿಂದ ಪ್ರತಿ ತಿಂಗಳು ಸುಮಾರು ₹2,500ರ ವರೆಗೆ ವಸೂಲಿ ಮಾಡುತ್ತಾರೆ. ಹಣ ನೀಡದವರಿಗೆ ಕೆಲಸ ನೀಡದೆ ಅಲೆದಾಡಿಸುತ್ತಾರೆ. ಈ ಕುರಿತು ಪ್ರಶ್ನಿಸುವವರಿಗೆ ಕೆಲಸ ನೀಡದೆ ಸತಾಯಿಸುತ್ತಾರೆ. ಏಕವಚನದಲ್ಲಿ ಮಾಡುವ ಜತೆಗೆ ಮಹಿಳಾ ಸಿಬ್ಬಂದಿಯೊಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಗೃಹ ರಕ್ಷಕರೊಬ್ಬರು ತಿಳಿಸಿದರು.

ವೆಂಕಟೇಶ್‌ ಅವರ ಪ್ರತಿಕ್ರಿಯೆ ಪಡೆಯಲು ಕರೆ ಮಾಡಿದರೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಗೃಹ ರಕ್ಷಕದಳದ ಜಿಲ್ಲಾ ಹಂಗಾಮಿ ಕಮಾಡೆಂಟ್, ಡಿವೈಎಸ್ಪಿ ಪ್ರಭುಶಂಕರ್‌ ಅವರನ್ನು ಪ್ರಶ್ನಿಸಿದರೆ, ‘ಈ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಆದರೆ ಯಾರೊಬ್ಬರೂ ದೂರು ನೀಡಿಲ್ಲ. ಈ ಕುರಿತು ತನಿಖೆ ನಡೆಸುತ್ತೇವೆ’ ಎಂದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !