ನಾಲ್ಕರ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್ : ಫ್ಲೆಮಿಂಗ್

ಗುರುವಾರ , ಏಪ್ರಿಲ್ 25, 2019
33 °C

ನಾಲ್ಕರ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್ : ಫ್ಲೆಮಿಂಗ್

Published:
Updated:
Prajavani

ಚೆನ್ನೈ: ವಿಕೆಟ್‌ಕೀಪರ್, ಬ್ಯಾಟ್ಸ್‌ಮನ್ ಮಹೆಂದ್ರಸಿಂಗ್ ಧೋನಿ ಅವರು ತಮ್ಮ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ ಎಂದು ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದರು.

ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡವು ಈ ಬಾರಿ  ಉದ್ಘಾಟನೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎದುರಿಸಲಿದೆ. ಈ ಕುರಿತು ಫ್ಲೆಮಿಂಗ್ ಮಾತನಾಡಿದರು.

‘ಈ ಮೊದಲು ಕೂಡ ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅವರು ಯಾವುದೇ ಕ್ರಮಾಂಕದಲ್ಲಿಯೂ  ಆಡುವ ಸಮರ್ಥರು. ಹೋದ ಆವೃತ್ತಿಯ ಟೂರ್ನಿಯಲ್ಲಿ ಅವರು ಉತ್ತಮ ಫಾರ್ಮ್‌ನಲ್ಲಿದ್ದರು. ಈ ಬಾರಿ ನಮ್ಮ ತಂಡದಲ್ಲಿ ಕೇದಾರ್ ಜಾಧವ್ ಕೂಡ ಇದ್ದಾರೆ. ಅವರನ್ನು ನಾಲ್ಕರಿಂದ  ಏಳನೇ ಕ್ರಮಾಂಕದಲ್ಲಿ  ಆಡಲು ಕಣಕ್ಕಿಳಿಸಬಹುದು. ಅವರು ಇನಿಂಗ್ಸ್‌ನ ಕೊನೆಯ ಹಂತದಲ್ಲಿ ಹೆಚ್ಚು ರನ್‌ ಗಳಿಸುವ ಸಮರ್ಥರಾಗಿದ್ದಾರೆ’ ಎಂದರು.

‘ಚೆನ್ನೈ ತಂಡದಲ್ಲಿರುವ ಎಲ್ಲ ಬೌಲರ್‌ಗಳೂ ಉತ್ತಮ ಲಯದಲ್ಲಿದ್ದಾರೆ. ಅದರಲ್ಲೂ ಇಮ್ರಾನ್ ತಾಹೀರ್, ಕರ್ಣ ಶರ್ಮಾ ಮತ್ತು ಅನುಭವಿ ಆಫ್‌ಸ್ಪಿನ್ನರ್ ಹರಭಜನ್ ಸಿಂಗ್ ಅವರು ಪಂದ್ಯದ ಫಲಿತಾಂಶ ನಿರ್ಧರಿಸಬಲ್ಲವರು’ ಎಂದು ಫ್ಲೆಮಿಂಗ್ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !