ಆಸ್ಟ್ರೇಲಿಯಾ ಎದುರು ಸರಣಿ ಸೋತಿದ್ದು ಒಳ್ಳೆಯದು: ದ್ರಾವಿಡ್

ಗುರುವಾರ , ಏಪ್ರಿಲ್ 25, 2019
33 °C

ಆಸ್ಟ್ರೇಲಿಯಾ ಎದುರು ಸರಣಿ ಸೋತಿದ್ದು ಒಳ್ಳೆಯದು: ದ್ರಾವಿಡ್

Published:
Updated:
Prajavani

ಮುಂಬೈ: ಭಾರತ ಕ್ರಿಕೆಟ್ ತಂಡವು ಈಚೆಗೆ ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಸೋತಿದ್ದು ಒಳ್ಳೆಯದೇ ಆಯಿತು. ವಿಶ್ವಕಪ್ ಟೂರ್ನಿಗಾಗಿ ಮತ್ತಷ್ಟು ಒಳ್ಳೆಯ ಸಿದ್ಧತೆ ಮಾಡಿಕೊಳ್ಳಲು ಇದು ಪಾಠವಾಗಬೇಕು ಎಂದು ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ವೀಕ್ಷಕ ವಿವರಣೆಕಾರ ಸಂಜಯ್ ಮಾಂಜ್ರೇಕರ್ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಹುಲ್, ‘

ಆತಿಥೇಯ ಭಾರತ ತಂಡವು ಈಚೆಗೆ 2–3 ರಿಂದ ಆಸ್ಟ್ರೇಲಿಯಾ ಎದುರು ಸರಣಿ ಸೋತಿತ್ತು.

‘ವಿಶ್ವಕಪ್ ಟೂರ್ನಿಯ ಪೈಪೋಟಿ ಎಲ್ಲಕ್ಕಿಂತ ಭಿನ್ನ. ಅಲ್ಲಿ ಸುಲಭ ಜಯ ಎಂಬುದಿಲ್ಲ. ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಆದ ಲೋಪಗಳನ್ನು ತಿದ್ದಿಕೊಂಡು ಮುಂದುವರಿಯಬೇಕು’ ಎಂದು ಅಭಿಪ್ರಾಯಪಟ್ಟರು.

‘ಕೆಲವು ವರ್ಷಗಳಿಂದ ಭಾರತ ತಂಡವು ಉತ್ತಮವಾಗಿ ಆಡುತ್ತಿದೆ. ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಇದೆಲ್ಲವೂ ವಿಶ್ವಕಪ್ ಟೂರ್ನಿಯಲ್ಲಿ ಆಡಲು ತಂಡದ ಆತ್ಮಬಲವನ್ನು ಗಟ್ಟಿಗೊಳಿಸುತ್ತದೆ. ಆದರೂ ತುಸು ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಕಪ್ ಗೆಲುವು ಸಾಧ್ಯ’ ಎಂದು ರಾಹುಲ್ ಹೇಳಿದರು.

‘ಈಗಾಲೂ ಭಾರತವೇ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಜಯದ ಹಾದಿ ಕಠಿಣವಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಾವುದೂ ಸುಲಭವಾಗಿ ಸಿಗುವುದಿಲ್ಲ’ ಎಂದರು. 

ಬರಹ ಇಷ್ಟವಾಯಿತೆ?

 • 67

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !