ಮೈಂಡ್‌ಟ್ರೀ: 26ಕ್ಕೆ ಷೇರು ಮರು ಖರೀದಿ ನಿರ್ಧಾರ

ಗುರುವಾರ , ಏಪ್ರಿಲ್ 25, 2019
29 °C

ಮೈಂಡ್‌ಟ್ರೀ: 26ಕ್ಕೆ ಷೇರು ಮರು ಖರೀದಿ ನಿರ್ಧಾರ

Published:
Updated:

ನವದೆಹಲಿ: ಷೇರು ಮರು ಖರೀದಿಯ ಉದ್ದೇಶಿತ ಪ್ರಸ್ತಾವದ ಬಗ್ಗೆ ನಿರ್ಧಾರಕ್ಕೆ ಬರಲು ಐ.ಟಿ ಸಂಸ್ಥೆ ಮೈಂಡ್‌ಟ್ರೀನ ನಿರ್ದೇಶಕ ಮಂಡಳಿಯು ಇದೇ 26ರಂದು ಮತ್ತೆ ಸಭೆ ಸೇರಲಿದೆ.

ಬೆಂಗಳೂರಿನ ಸಂಸ್ಥೆಯನ್ನು ಒತ್ತಾಯಪೂರ್ವಕವಾಗಿ ತನ್ನ ಸ್ವಾಧೀನಕ್ಕೆ  ತೆಗೆದುಕೊಳ್ಳಲು ಎಂಜಿನಿಯರಿಂಗ್‌ ಸಂಸ್ಥೆ ಲಾರ್ಸನ್‌ ಆ್ಯಂಡ್‌ ಟುಬ್ರೊ (ಎಲ್‌ಆ್ಯಂಡ್‌ಟಿ)  ಮುಂದಾಗಿದೆ.

ಷೇರು ಮರು ಖರೀದಿ ಸಂಬಂಧ ಸಂಸ್ಥೆಯ ನಿರ್ದೇಶಕ ಮಂಡಳಿಯು ಬುಧವಾರ ಸಭೆ ಸೇರಿ ಚರ್ಚಿಸುವ ಸಂಬಂಧ  ಸಂಸ್ಥೆಯು ಷೇರುಪೇಟೆಗಳಿಗೆ ಮಾಹಿತಿ ನೀಡಿತ್ತು. ಅಂದಿನ ಸಭೆಯಲ್ಲಿ ವಿವರವಾದ ಚರ್ಚೆಯ ನಂತರ, ಯಾವುದೇ ಖಚಿತ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಭೆಯನ್ನು ಮುಂದೂಡಲಾಗಿತ್ತು.

ಮುಂದೂಡಿದ ಸಭೆಯನ್ನು ಇದೇ 26ರಂದು (ಮಂಗಳವಾರ) ಕರೆಯಲಾಗಿದೆ ಎಂದು ಸಂಸ್ಥೆಯು ಮುಂಬೈ ಷೇರುಪೇಟೆಗೆ ಗುರುವಾರ ತಿಳಿಸಿದೆ.

ಮೈಂಡ್‌ಟ್ರೀನಲ್ಲಿನ ಶೇ 66ರಷ್ಟು ಪಾಲು ಬಂಡವಾಳವನ್ನು ₹ 10,800 ಕೋಟಿಗೆ ತನ್ನ ವಶಕ್ಕೆ ಪಡೆದುಕೊಳ್ಳಲು ಎಲ್‌ಆ್ಯಂಡ್‌ಟಿ ಮುಂದಾಗಿದೆ.

ಈ ಸಂಬಂಧ, ಸಂಸ್ಥೆಯಲ್ಲಿನ ಕೆಫೆ ಕಾಫಿ ಡೇ ಮಾಲೀಕ ವಿ. ಜಿ. ಸಿದ್ದಾರ್ಥ ಅವರ ಶೇ 20.32ರಷ್ಟು ಷೇರುಗಳನ್ನು,  ಮುಕ್ತ ಮಾರುಕಟ್ಟೆಯಿಂದ ಶೇ 15ರಷ್ಟು ಷೇರುಗಳನ್ನು ಮತ್ತು ಶೇ 31ರಷ್ಟು ಷೇರುಗಳನ್ನು ಮುಕ್ತ ಕೊಡುಗೆ ಮೂಲಕ ಖರೀದಿಸಲು ಎಲ್‌ಆ್ಯಂಡ್‌ಟಿ ಉದ್ದೇಶಿಸಿದೆ.

ಸಿದ್ಧಾರ್ಥ ಅವರು 1999ರಿಂದ ಮೈಂಡ್‌ಟ್ರೀ ನಿರ್ದೇಶಕರಾಗಿದ್ದರು. 2018ರ ಮಾರ್ಚ್‌ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !