ವಿಶ್ವದಲ್ಲಿ ಭಾರತ ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ-ಐಎಂಎಫ್

ಶುಕ್ರವಾರ, ಏಪ್ರಿಲ್ 26, 2019
31 °C
nation

ವಿಶ್ವದಲ್ಲಿ ಭಾರತ ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ-ಐಎಂಎಫ್

Published:
Updated:
Prajavani

ನವದೆಹಲಿ: ಪ್ರಪಂಚದ ಅರ್ಥವ್ಯವಸ್ಥೆಯಲ್ಲಿ ಅತಿವೇಗದಿಂದ ಅಭಿವೃದ್ಧಿ ಹೊಂದುತ್ತಿರುವ ಬೃಹತ್ ಗಾತ್ರದ ಅರ್ಥವ್ಯವಸ್ಥೆಯ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ. ಈ ಮಾತನ್ನು ಪುಷ್ಟೀಕರಿಸುತ್ತಾ, ಕಳೆದ ಐದು ವರ್ಷಗಳಲ್ಲಿ ದೇಶ ಹಲವು ಆರ್ಥಿಕ ನೀತಿಗಳಲ್ಲಿ ಸುಧಾರಣೆ ತಂದಿದೆ. ಇನ್ನೂ ಸಾಕಷ್ಟು ಸುಧಾರಣೆ ಮಾಡಬೇಕಿದೆ ಎಂದು ಐಎಂಎಫ್ ಹೇಳಿದೆ.

ಪತ್ರಿಕಾಗೋಷ್ಟಿಯಲ್ಲಿ ಭಾರತದ ಆರ್ಥ ವ್ಯವಸ್ಥೆ ಬೆಳವಣಿಗೆ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಐಎಂಎಫ್ ಸಂಪರ್ಕ ವಿಭಾಗದ ನಿರ್ದೇಶಕ ಗೆರ್ರಿ ರೈಸ್ ಈ ವಿಷಯ ತಿಳಿಸಿದರು. ಭಾರತ ತಡವಾಗಿಯಾದರೂ ಪ್ರಪಂಚದ ಅರ್ಥವ್ಯವಸ್ಥೆಯಲ್ಲಿ ಅತೀ ವೇಗವಾಗಿ ಅಭಿವೃದ್ಧಿ ಕಂಡ ರಾಷ್ಟ್ರಗಳಲ್ಲಿ ಒಂದಾಗಿದೆ. ಕಳೆದ ಐದು ವರ್ಷಗಳಲ್ಲಿ ಬೆಳವಣಿಗೆ ದರದ ಮಟ್ಟ ಸರಾಸರಿ ಏಳರಷ್ಟಿದೆ. ದೇಶದಲ್ಲಿ ಪ್ರಮುಖ ಸುಧಾರಣೆಗಳನ್ನು ತರಲಾಗಿದೆ. ಈ ಮಟ್ಟದ ಬೆಳವಣಿಗೆ ದರದ ಸ್ಥಿರತೆ ಕಾಯ್ದುಕೊಳ್ಳಲು ಇನ್ನೂ ಹಲವು ಸುಧಾರಣೆಗಳನ್ನು ತರಬೇಕಾಗಿಬರಬಹುದು ಎಂದು ಅವರು ಹೇಳಿದ್ದಾರೆ.

ಮುಂದಿನ ತಿಂಗಳು ವಿಶ್ವಬ್ಯಾಂಕ್ ಜೊತೆಗೂಡಿ ಐಎಂಎಫ್ ಹಮ್ಮಿಕೊಂಡಿರುವ ವಾರ್ಷಿಕ ಮಹಾಸಭೆ ಸಂದರ್ಭ, ವಿಶ್ವ ಅರ್ಥವ್ಯವಸ್ಥೆಯ ಮುನ್ನೋಟ(World Economic Outlook ) ಕುರಿತ ಸಮೀಕ್ಷಾ ವರದಿಯು ಬಿಡುಗಡೆಯಾಗಲಿದ್ದು, ಆ ವರದಿಯಲ್ಲಿ ಭಾರತದ ಅರ್ಥವ್ಯವಸ್ಥೆಯ ಕುರಿತು ಸವಿವರವಾಗಿ ತಿಳಿಸಲಾಗಿದೆ ಎಂದರು. ಈ ವರದಿಯು ಪ್ರಸ್ತುತ ಐಎಂಎಫ್‌ನ ಮುಖ್ಯ ಹಣಕಾಸು ತಜ್ಞೆಯಾಗಿರುವ , ಭಾರತೀಯ ಮೂಲದ ಅಮೆರಿಕಾ ಅರ್ಥಿಕತಜ್ಞೆ ಗೀತಾ ಗೋಪಿನಾಥ್ ಅವರ ಪ್ರಥಮ ವರದಿಯಾಗಿದೆ ಎಂದರು.

ವಿಶ್ವ ಆರ್ಥವ್ಯವಸ್ಥೆ ಮುನ್ನೋಟದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಬ್ಯಾಂಕುಗಳಲ್ಲಿ ಸಾಲವಸೂಲಾತಿ, ಹಣಕಾಸು ಕ್ರೋಢೀಕರಣ ಮುಂದುವರಿಸುವುದು, ಬ್ಯಾಂಕು ಮತ್ತು ವಸೂಲಾಗಬೇಕಾದ ಸಾಲದ ಮಟ್ಟವನ್ನು ಕಡಿಮೆ ಮಾಡುವುದೂ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ಒತ್ತು ನೀಡಿ ಚರ್ಚಿಸಲಾಗುವುದು. ಅಲ್ಲದೆ, ಸುಧಾರಣಾ ನೀತಿ, ಆದ್ಯತೆಗಳ ನಡುವೆ ವೇಗವನ್ನು ಹೆಚ್ಚಿಸುವತ್ತ ಗಮನ ಹರಿಸಲಾಗುವುದು. ಮಾರುಕಟ್ಟೆ, ಕಾರ್ಮಿಕರು, ಭೂ ಸುಧಾರಣೆ ಮಟ್ಟಕ್ಕೂ ಸುಧಾರಣಾ ನೀತಿಯನ್ನ ವಿಸ್ತರಿಸಿ ನಿರ್ವಹಿಸುವುದು, ಇದರ ಜೊತೆ ವ್ಯಾಪಾರದ ವಾತಾವರಣವನ್ನ ತಳಮಟ್ಟಕ್ಕೆ ವಿಸ್ತರಿಸಿ ಆಂತರಿಕ ಅಭಿವೃದ್ಧಿ ಹೊಂದುವುದು ಆ ಮೂಲಕ ವೇಗದ ಅಭಿವೃದ್ಧಿಗೆ ಹೆಚ್ಚು ಒತ್ತುಕೊಡಲಾಗುವುದು ಎಂದು ಗೆರ್ರಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 19

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !