ಯುಗಾದಿಗೆ ‘ಕವಚ’ ಬಿಡುಗಡೆ

ಸೋಮವಾರ, ಏಪ್ರಿಲ್ 22, 2019
29 °C

ಯುಗಾದಿಗೆ ‘ಕವಚ’ ಬಿಡುಗಡೆ

Published:
Updated:
Prajavani

‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್‌ ನಟಿಸಿರುವ ರಿಮೇಕ್‌ ಚಿತ್ರ ‘ಕವಚ’ ಏಪ್ರಿಲ್‌ 5ರಂದು ಬಿಡುಗಡೆಯಾಗುತ್ತಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕೆಲವು ತಿಂಗಳ ಹಿಂದೆಯೇ ಈ ಚಿತ್ರ ಬಿಡುಗಡೆ ಕಾಣಬೇಕಿತ್ತು. ಈಗ ಯುಗಾದಿ ಹಬ್ಬಕ್ಕೆ ಪ್ರೇಕ್ಷಕರಿಗೆ ರಂಜನೆ ನೀಡಲು ಚಿತ್ರತಂಡ ಸಜ್ಜಾಗಿದೆ. ಮಲಯಾಳದ ‘ಒಪ್ಪಂ’ ಚಿತ್ರದ ರಿಮೇಕ್ ಇದು. ನಟ ಮೋಹನ್‍ಲಾಲ್‌ ನಟಿಸಿದ್ದ ಪಾತ್ರಕ್ಕೆ ಕನ್ನಡದಲ್ಲಿ ಶಿವಣ್ಣ ಜೀವ ತುಂಬಿದ್ದಾರೆ. ಒಂದೂವರೆ ದಶಕದ ಬಳಿ ಅವರು ರಿಮೇಕ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಜಿ.ವಿ.ಆರ್. ವಾಸು ನಿರ್ದೇಶನದ ಚಿತ್ರ ಇದು. ಸಾಗರ, ಬೆಂಗಳೂರು, ಮೈಸೂರು, ಮಡಿಕೇರಿ, ಊಟಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಈ ಕಥೆಯ ನಾಯಕ ಅಂಧ. ಜಗತ್ತು ಕಾಣದಿದ್ದರೂ ಚಲನವಲನ, ದೈಹಿಕವಾಗಿ ಆತ ಬಲಶಾಲಿಯಾಗಿರುತ್ತಾನೆ. ಜೀವನದಲ್ಲಿ ನಡೆಯುವ ಒಂದು ಘಟನೆಯಿಂದ ಆತ ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ. ಕೊನೆಗೆ, ಬುದ್ಧಿವಂತಿಕೆಯಿಂದ ಹೇಗೆ ಅದನ್ನು ಸರಿಪಡಿಸಿಕೊಳ್ಳುತ್ತಾನೆ ಎಂಬುದೇ ಚಿತ್ರದ ಹೂರಣ. 

ಕೃತ್ತಿಕಾ, ರಮೇಶ್‍ ಭಟ್, ಗಿರಿಜಾ ಲೋಕೇಶ್, ರವಿ ಕಾಳೆ, ಲಕ್ಷ್ಮಿ ಹೆಗಡೆ, ವಸಿಷ್ಠ ಸಿಂಹ,  ರವೀಂದ್ರನಾಥ್, ರಾಜೇಶ್‍ ನಟರಂಗ, ಇತಿ ಆಚಾರ್ಯ, ಲಯೇಂದ್ರ, ತಬಲ ನಾಣಿ, ನವೀನ್ ತಾರಾಗಣದಲ್ಲಿದ್ದಾರೆ. ಅರ್ಜುನ್‍ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಎರಡು ಸಾಹಸ ದೃಶ್ಯಗಳಿದ್ದು, ಮನಸ್ಸಿನೊಳಗೆ ಕಾಣುವ ಕಣ್ಣು, ಶಬ್ದದ ಮೂಲಕ ಶಿವಣ್ಣ ಎದುರಾಳಿಗಳೊಂದಿಗೆ ಹೋರಾಡುವುದೇ ಈ ಚಿತ್ರದ ವಿಶೇಷ. ಎಂ.ವಿ.ವಿ. ಸತ್ಯನಾರಾಯಣ ಮತ್ತು ಎ. ಸಂಪತ್‌ಕುಮಾರ್‌ ಬಂಡವಾಳ ಹೂಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !