ಹರಿಹರದಲ್ಲಿ ಯೂರಿಯಾ ಕಾರ್ಖಾನೆ

ಶುಕ್ರವಾರ, ಏಪ್ರಿಲ್ 26, 2019
32 °C
ಸಹಕಾರ ಮಾರಾಟ ಮಂಡಳಿಯಿಂದ ಪ್ರಸ್ತಾವ

ಹರಿಹರದಲ್ಲಿ ಯೂರಿಯಾ ಕಾರ್ಖಾನೆ

Published:
Updated:

ಮಂಗಳೂರು: ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿಂದ ವಾರ್ಷಿಕ 12.5 ಲಕ್ಷ ಟನ್‌ ಸಾಮರ್ಥ್ಯದ ಯೂರಿಯಾ ರಸಗೊಬ್ಬರ ಉತ್ಪಾದನಾ ಕಾರ್ಖಾನೆ ಸ್ಥಾಪಿಸುವ ಪ್ರಸ್ತಾವವಿದೆ ಎಂದು ಮಹಾಮಂಡಳದ ಅಧ್ಯಕ್ಷ ಎಂ.ಎನ್‌.ರಾಜೇಂದ್ರಕುಮಾರ್ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ರಾಜ್ಯಕ್ಕೆ ವಾರ್ಷಿಕ 15 ಲಕ್ಷ ಟನ್‌ ಯೂರಿಯಾ ರಸಗೊಬ್ಬರ ಬೇಕಿದೆ. ಮಂಗಳೂರು ಕೆಮಿಕಲ್‌ ಅಂಡ್‌ ಫರ್ಟಿಲೈಸರ್ಸ್‌ನಲ್ಲಿ (ಎಂಸಿಎಫ್‌) ವಾರ್ಷಿಕ 4.5 ಲಕ್ಷ ಟನ್‌ ಉತ್ಪಾದನೆ ಆಗುತ್ತಿದೆ. ಸಂಪೂರ್ಣ ಬೇಡಿಕೆಯನ್ನು ಪೂರೈಸಲು ಮಹಾಮಂಡಳದಿಂದ ಗೊಬ್ಬರ ಕಾರ್ಖಾನೆ ಆರಂಭಿಸಲು ಯೋಚಿಸಲಾಗಿದೆ’ ಎಂದರು.

ಕಾರ್ಖಾನೆ ಆರಂಭಕ್ಕೆ ಅನುಮತಿ ಕೋರಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಪತ್ರ ಬರೆಯಲಾಗಿತ್ತು. ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದರೆ ತಕ್ಷಣದಲ್ಲೇ ಅನುಮತಿ ನೀಡುವುದಾಗಿ ಅವರ ಸಚಿವಾಲಯದಿಂದ ಪ್ರತಿಕ್ರಿಯೆ ಬಂದಿದೆ. ಹರಿಹರ ಸಮೀಪ ಜಾಗವನ್ನೂ ಗುರುತಿಸಲಾಗಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !