ಗುರುವಾರ , ಏಪ್ರಿಲ್ 15, 2021
26 °C

ಫಿಂಚ್‌ ಶತಕ: ಆಸ್ಟ್ರೇಲಿಯಾಗೆ ಜಯ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಶಾರ್ಜಾ: ನಾಯಕ ಆ್ಯರನ್ ಫಿಂಚ್ (116; 135 ಎಸೆತ, 8ಬೌಂಡರಿ, 4ಸಿಕ್ಸರ್) ಅವರ ಶತಕದ ಬಲದಿಂದ  ಆಸ್ಟ್ರೇಲಿಯಾ ತಂಡವು ಇಲ್ಲಿ ಆರಂಭವಾದ ಪಾಕಿಸ್ತಾನ ತಂಡದ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗೆದ್ದಿತು.

ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ಹ್ಯಾರಿಸ್ ಸೊಹೈಲ್ (ಔಟಾಗದೆ 101) ಶತಕದ ನೆರವಿನಿಂದ 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 280 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು ಆರಂಭದಲ್ಲಿಯೇ ಉಸ್ಮಾನ್ ಖ್ವಾಜಾ ಅವರ ವಿಕೆಟ್ ಕಳೆದುಕೊಂಡಿತು. ಆದರೆ ಫಿಂಚ್ ಮತ್ತು ಶಾನ್ ಮಾರ್ಷ್ (ಔಟಾಗದೆ 91) ಎರಡನೇ ವಿಕೆಟ್‌ಗೆ 172 ರನ್‌ ಗಳಿಸಿದರು. ತಂಡವನ್ನು ಗೆಲುವಿನ ದಡ ಸೇರಿಸಿದರು.

ಆಸ್ಟ್ರೇಲಿಯಾ ತಂಡವು ಈಚೆಗೆ ಭಾರತದ ವಿರುದ್ಧ 3–2 ರಿಂದ ಸರಣಿ ಗೆದ್ದಿತ್ತು. ಈಗ ಪಾಕಿಸ್ತಾನ ಎದುರು ಐದು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿದೆ. ಭಾನುವಾರ ಎರಡನೇ ಪಂದ್ಯ ನಡೆಯಲಿದೆ.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 280 (ಮಸೂದ್ 40, ಹ್ಯಾರಿಸ್ ಸೊಹೈಲ್ ಔಟಾಗದೆ 101, ಉಮರ್ ಅಕ್ಮಲ್ 49, ಕೌಲ್ಟರ್ ನೈಲ್ 61ಕ್ಕೆ2, ನೇಥನ್ ಲಯನ್ 38ಕ್ಕೆ1): ಆಸ್ಟ್ರೇಲಿಯಾ: 49 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 281 (ಉಸ್ಮಾನ್ ಖ್ವಾಜಾ 24, ಆ್ಯರನ್ ಫಿಂಚ್ 116, ಶಾನ್ ಮಾರ್ಷ್ ಔಟಾಗದೆ 91, ಪೀಟರ್ ಹ್ಯಾಂಡ್ಸ್‌ಕಂಬ್ ಔಟಾಗದೆ 30) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 8 ವಿಕೆಟ್‌ಗಳ ಜಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು