ಎಂಡಿಎಂಎ ವಶ: ಇಬ್ಬರ ಬಂಧನ

ಶನಿವಾರ, ಏಪ್ರಿಲ್ 20, 2019
31 °C

ಎಂಡಿಎಂಎ ವಶ: ಇಬ್ಬರ ಬಂಧನ

Published:
Updated:
Prajavani

ಮಂಗಳೂರು: ಹೊರರಾಜ್ಯದಿಂದ ಮಾದಕವಸ್ತುಗಳನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆಮಾಡಿರುವ ನಗರದ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ಅವರಿಂದ 24 ಗ್ರಾಂ. ಎಂಡಿಎಂಎ ಮಾತ್ರೆಗಳನ್ನು ವಶ‍ಪಡಿಸಿಕೊಂಡಿದ್ದಾರೆ.

ಬಂಟ್ವಾಳದ ನೆತ್ತರಕೆರೆ ನಿವಾಸಿ ಜಾವೆದ್‌ (28) ಮತ್ತು ತೊಕ್ಕೊಟ್ಟು ನಿವಾಸಿ ಶಾನವಾಝ್‌ (33) ಬಂಧಿತರು. ನಗರದ ಪಿವಿಎಸ್‌ ವೃತ್ತದ ಬಳಿಯ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ ಒಂದರಲ್ಲಿ ವಾಸವಿದ್ದು, ಆರೋಪಿಗಳು ಮಾದಕವಸ್ತು ಮಾರಾಟ ಮಾಡುತ್ತಿದ್ದರು. ಇಬ್ಬರನ್ನೂ ಭಾನುವಾರ ಬಂಧಿಸಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ಬಂಧಿತರಿಂದ ₹ 72,000 ಮೌಲ್ಯದ 24 ಗ್ರಾಂ ಎಂಡಿಎಂಎ ಮಾತ್ರೆಗಳು, ಬೈಕ್, ಮೊಬೈಲ್ ಸೇರಿದಂತೆ ಒಟ್ಟು ₹ 2.20 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಾವೆದ್ ಗ್ರಾಹಕರಿಗೆ ಮಾದಕವಸ್ತು ಮಾರಾಟ ಮಾಡುತ್ತಿದ್ದ. ಶಾನವಾಝ್‌ ಮಧ್ಯವರ್ತಿಯಾಗಿದ್ದು, ಮುಂಬೈ ವ್ಯಕ್ತಿಯಿಂದ ಮಾದಕವಸ್ತು ತಂದು ಕೊಡುತ್ತಿದ್ದ. ಮುಂಬೈನ ವ್ಯಕ್ತಿಯೊಬ್ಬ ಇವರಿಗೆ ಮಾದಕವಸ್ತು ಪೂರೈಸುತ್ತಿದ್ದ. ಆರಂಭದಲ್ಲಿ ಜಾವೆದ್‍ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇನ್ನೂ ಇಬ್ಬರು ಆರೋಪಿಗಳ ವಿವರ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಅಪರಾಧ ದಾಖಲೆಗಳ ಘಟಕದ (ಸಿಸಿಆರ್‍ಬಿ) ಎಸಿಪಿ ವಿನಯ ಗಾಂವ್ಕರ್, ಆರ್ಥಿಕ ಅಪರಾಧ ಪತ್ತೆ ವಿಭಾಗದ ಇನ್‌ಸ್ಪೆಕ್ಟರ್‌ ರಾಮಕೃಷ್ಣ, ನಗರ ಅಪರಾಧ ಘಟಕದ (ಸಿಸಿಬಿ) ಇನ್‍ಸ್ಪೆಕ್ಟರ್ ಶಿವಪ್ರಕಾಶ್ ನಾಯಕ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !