ಗದ್ದಿಗೌಡರ ಆಸ್ತಿ ಮೌಲ್ಯ ₹4.39 ಕೋಟಿ

ಶುಕ್ರವಾರ, ಏಪ್ರಿಲ್ 26, 2019
33 °C

ಗದ್ದಿಗೌಡರ ಆಸ್ತಿ ಮೌಲ್ಯ ₹4.39 ಕೋಟಿ

Published:
Updated:
Prajavani

ಬಾಗಲಕೋಟೆ: ಸಂಸದ ಪಿ.ಸಿ.ಗದ್ದಿಗೌಡರ ಸೋಮವಾರ ನಾಮಪತ್ರ ಸಲ್ಲಿಸಿದ್ದು, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಅವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ ₹4.39 ಕೋಟಿ. 2014ರ ಚುನಾವಣೆಯಲ್ಲಿ ಗದ್ದಿಗೌಡರು ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಅವರ ಚರ ಹಾಗೂ ಸ್ಥಿರಾಸ್ಥಿ ಮೌಲ್ಯ ₹2.53 ಕೋಟಿ ಇತ್ತು. ವಿಶೇಷವೆಂದರೆ ಗದ್ದಿಗೌಡರ ಪತ್ನಿ ಸಾವಿತ್ರಿ ಅವರ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ.

ಗದ್ದಿಗೌಡರ ಕೈಯಲ್ಲಿ ₹4 ಲಕ್ಷ, ₹18 ಲಕ್ಷ ಮೌಲ್ಯದ ಇನ್ನೋವಾ ಕಾರು, 100 ಗ್ರಾಂ ಬಂಗಾರ ಇದೆ. ಪತ್ನಿ ಸಾವಿತ್ರಿ ಬಳಿ ₹25 ಸಾವಿರ ನಗದು, 500 ಗ್ರಾಂ ಚಿನ್ನಭರಣ ಇದೆ. ಪುತ್ರ ಚಂದನಗೌಡ ಬಳಿ ₹2 ಲಕ್ಷ ನಗದು ಇದೆ. ಹುಂಡೈ ಐ10 ಕಾರು, ಟ್ರ್ಯಾಕ್ಟರ್ ಹಾಗೂ ಬೈಕ್, 150 ಗ್ರಾಂ ಚಿನ್ನಾಭರಣ ಇದೆ.

ಬೆಂಗಳೂರಿನಲ್ಲಿ ಎರಡು ನಿವೇಶನ ಸೇರಿದಂತೆ ಊರಿನಲ್ಲಿ ಪಿತ್ರಾರ್ಜಿತವಾಗಿ ಬಂದ ಜಮೀನು ಸೇರಿದಂತೆ ಗದ್ದಿಗೌಡರ ಹೆಸರಿನಲ್ಲಿ ₹2.60 ಕೋಟಿ ಮೌಲ್ಯದ ಸ್ಥಿರಾಸ್ತಿ ಇದ್ದರೆ, ಪುತ್ರ ಚಂದನಗೌಡ ಹೆಸರಿನಲ್ಲಿ ₹92 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಗೌಡರ ಹೆಸರಿನಲ್ಲಿ ₹54,91,386 ಸಾಲ ಇದ್ದರೆ, ಪುತ್ರನ ಹೆಸರಿನಲ್ಲಿ ₹24,96,605 ಋಣ ಭಾರವಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !