‘ಹಿಂದುಳಿದವರಿಗೆ ಟಿಕೆಟ್ ಕೊಡದೇ ಅನ್ಯಾಯ’

ಗುರುವಾರ , ಏಪ್ರಿಲ್ 25, 2019
31 °C
.

‘ಹಿಂದುಳಿದವರಿಗೆ ಟಿಕೆಟ್ ಕೊಡದೇ ಅನ್ಯಾಯ’

Published:
Updated:

ಬಾಗಲಕೋಟೆ: ‘ರಾಜ್ಯದ ಸಾಮಾನ್ಯ ಕ್ಷೇತ್ರಗಳಲ್ಲಿ ಒಂದು ಕಡೆಯೂ ಟಿಕೆಟ್ ನೀಡದೇ ಹಿಂದುಳಿದ ವರ್ಗದವರಿಗೆ ಬಿಜೆಪಿ ದೊಡ್ಡ ಅನ್ಯಾಯ ಮಾಡಿದೆ. ಈಶ್ವರಪ್ಪ ಆ ಪಕ್ಷದಲ್ಲಿರೋದೆ ದಂಡ. ಹಿಂದುಳಿದವರಿಗೆ ಒಬ್ಬರಿಗೆ ಟಿಕೆಟ್ ಕೊಡಿಸೋಕೆ ಆಗದಿದ್ರೆ ಅವರನ್ನು ಕುರುಬರು ಎಂದು ಕರೀಬೇಕಾ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಲೇವಡಿ ಮಾಡಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೀಸಲು ಕ್ಷೇತ್ರಗಳು ಇರುವ ಕಾರಣಕ್ಕೆ ಬಿಜೆಪಿಯವರು ಪರಿಶಿಷ್ಟ ಜಾತಿ, ಪಂಗಡದವರಿಗೆ ಟಿಕೆಟ್ ಕೊಟ್ಟಿದ್ದಾರೆ. ಇಲ್ಲದಿದ್ದರೆ ಆ ಕ್ಷೇತ್ರಗಳನ್ನೂ ಮುಂದುವರೆದವರಿಗೆ ಕೊಟ್ಟು ಬಿಡುತ್ತಿದ್ದರು. ಈಶ್ವರಪ್ಪ ಜಾತಿವಾದಿ ಪಕ್ಷದಲ್ಲಿದ್ದು, ಸೆಕ್ಯುಲರ್ ಪಕ್ಷವಾದ ಕಾಂಗ್ರೆಸ್ ಬಗ್ಗೆ ಮಾತಾಡುತ್ತಾರೆ ಎಂದು ಟೀಕಿಸಿದರು.

‘ಈಶ್ವರಪ್ಪನಿಗೆ ಪಾಪ ಬುದ್ಧಿ ಇಲ್ಲ. ಅವನ ಸ್ಥಿತಿ ತೋಳ–ಕುರಿಮರಿಯಂತಾಗಿದೆ. ಒಬ್ಬರೇ ಒಬ್ಬರಿಗೆ ಟಿಕೆಟ್ ಕೊಡಿಸಲು ಆಗಲಿಲ್ಲವೆಂದರೆ ಈಶ್ವರಪ್ಪ ಯಾವ ಸೀಮೆ ಲೀಡರ್’ ಎಂದು ಛೇಡಿಸಿದರು.

‘ಯಡಿಯೂರಪ್ಪನ ಮನುಷ್ಯ ಎಂಬ ಕಾರಣಕ್ಕೆ ಚಿಕ್ಕೋಡಿಯಲ್ಲಿ ಉಮೇಶ್ ಕತ್ತಿ ಸಹೋದರನಿಗೆ ಟಿಕೆಟ್ ತಪ್ಪಿಸಿ ಸಂತೋಷನ ಕ್ಯಾಂಡಿಡೇಟ್ ಹಾಕಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ಅನಂತಕುಮಾರ ಪತ್ನಿಗೆ ಕೊಡ್ತೀವಿ ಅಂದವರು ತಪ್ಪಿಸಿದ್ದಾರೆ. ಇದೆಲ್ಲಾ ಗಮನಿಸಿದರೆ ಬಿಜೆಪಿಯಲ್ಲಿ ಯಡಿಯೂರಪ್ಪನದು ಏನೂ ನಡೆಯುತ್ತಿಲ್ಲ. ಅವರ ಮಾತು ಯಾರೂ ಕೇಳುತ್ತಿಲ್ಲ ಎಂಬುದು ವೇದ್ಯವಾಗುತ್ತದೆ. ಯಡಿಯೂರಪ್ಪ ತೋರಿಕೆಗೆ ಆ ಪಕ್ಷದಲ್ಲಿದ್ದಾರೆ. ಈ ಚುನಾವಣೆ ನಂತರ ಅವರನ್ನು ಬಿಸಾಕಿ ಬಿಡುತ್ತಾರೆ’ ಎಂದು ಭವಿಷ್ಯ ನುಡಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !