ಟೀಕೆ ಮಾಡುವವರಿಗೆ ಉತ್ತರ ಕೊಡಿ: ಮಂಡ್ಯದಲ್ಲಿ ದರ್ಶನ್‌

ಬುಧವಾರ, ಏಪ್ರಿಲ್ 24, 2019
31 °C

ಟೀಕೆ ಮಾಡುವವರಿಗೆ ಉತ್ತರ ಕೊಡಿ: ಮಂಡ್ಯದಲ್ಲಿ ದರ್ಶನ್‌

Published:
Updated:
Prajavani

ಶ್ರೀರಂಗಪಟ್ಟಣ: ‘ನನ್ನನ್ನು ಗುರಿಯಾಗಿಸಿಕೊಂಡು ಯಾರಾರೋ ಏನೇನೋ ಆರೋಪ ಮಾಡುತ್ತಿದ್ದಾರೆ. ಅವರ ಟೀಕೆಗಳಿಗೆ ಉತ್ತರ ಕೊಡುವುದಿಲ್ಲ, ಏ. 18ರಂದು ಮತದಾನದ ದಿನ ನೀವೇ ಉತ್ತರ ಕೊಡಿ’ ಎಂದು ನಟ ದರ್ಶನ್‌ ಸೋಮವಾರ ಮತದಾರರನ್ನು ಕೋರಿದರು.

ತಾಲ್ಲೂಕಿನ ಕೆಆರ್‌ಎಸ್‌ ಹಾಗೂ ಇತರ ಗ್ರಾಮಗಳಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.

‘ಅಪ್ಪಾಜಿ ಅಂಬರೀಷ್ ಕಾವೇರಿ ನೀರಿಗಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ತ್ಯಾಗಮಯಿ. ಅವರು ಬಿಟ್ಟು ಹೋದ ಕೆಲಸಗಳನ್ನು ಪೂರ್ಣಗೊಳಿಸಬೇಕಾದರೆ ಸುಮಲತಾ ಅಮ್ಮ ಗೆದ್ದು ಬರಬೇಕು. ಅಮ್ಮ ಅಧಿಕಾರ ದಾಹದಿಂದ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ, ಜನರ ಸೇವೆಗಾಗಿ ಚುನಾವಣೆಗೆ ನಿಂತಿದ್ದಾರೆ’ ಎಂದರು.

ಅಂಬರೀಷ್ ಆಪ್ತ ಇಂಡುವಾಳು ಸಚ್ಚಿದಾನಂದ, 'ಅಂಬರೀಷ್ ಕೆಆರ್‌ಎಸ್‌ ಜಲಾಶಯ ಪುನಶ್ಚೇತನಕ್ಕೆ ₹ 50 ಕೋಟಿ ಕೊಡಿಸಿದ್ದಾರೆ. ಅಂಬರೀಷ್ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಸುಮಲತಾ ಅವರನ್ನು ಗೆಲ್ಲಿಸಬೇಕು' ಎಂದು ಹೇಳಿದರು.

ದರ್ಶನ್‌ ಪ್ರಚಾರದ ವೇಳೆ ಭಿಮಾನಿಗಳು ‘ಡಿ ಬಾಸ್‌’ ಘೋಷಣೆ ಮೊಳಗಿಸಿದರು. ಪ್ರಚಾರದುದ್ದಕ್ಕೂ ಹೆಗಲ ಮೇಲೆ ಹಸಿರು ಟವೆಲ್ ಹೊದ್ದು ಗಮನ ಸೆಳೆದರು. ಸುಮಲತಾ ಚಿಹ್ನೆ ‘ಕಹಳೆ’ಯನ್ನು ಜನರಿಗೆ ತೋರಿಸಿ ಕ್ರಮ ಸಂಖ್ಯೆ 20ಕ್ಕೆ ಮತ ಹಾಕುವಂತೆ ಹೇಳಿದರು. ಕೆಆರ್‌ಎಸ್‌ ಅರಳಿಮರ ವೃತ್ತದಲ್ಲಿ ಅಂಬರೀಷ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ವೇಳೆ ನೂಗು ನುಗ್ಗಲು ಉಂಟಾಯಿತು.

ಕಳ್ಳರ ಕೈಚಳಕ: ಈ ಸಂದರ್ಭದಲ್ಲಿ ಹುಲಿಕೆರೆ ಗ್ರಾ.ಪಂ ಸದಸ್ಯ ಮಂಜುನಾಥ್ ಜೇಬಿಗೆ ಕತ್ತರಿ ಹಾಕಿದ ಕಳ್ಳರು ₹ 11,500 ನಗದು, ಕ್ರೆಡಿಟ್ ಕಾರ್ಡ್‌ ಎಗರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !