ವೆಚ್ಚದ ಮಾಹಿತಿ ಸಲ್ಲಿಕೆ ಕಡ್ಡಾಯ

ಭಾನುವಾರ, ಏಪ್ರಿಲ್ 21, 2019
26 °C
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಮೂರು ಹಂತಗಳಲ್ಲಿ ದಾಖಲೆ ಹಾಜರುಪಡಿಸುವಂತೆ ಸೂಚನೆ

ವೆಚ್ಚದ ಮಾಹಿತಿ ಸಲ್ಲಿಕೆ ಕಡ್ಡಾಯ

Published:
Updated:
Prajavani

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ತಾವು ನಿರ್ವಹಿಸಿರುವ ಚುನಾವಣಾ ವೆಚ್ಚಗಳ ದಾಖಲೆಗಳನ್ನು ಮೂರು ಹಂತಗಳಲ್ಲಿ ಕಡ್ಡಾಯವಾಗಿ ವೆಚ್ಚ ವೀಕ್ಷಕರ ಪರಿಶೀಲನೆಗೆ ಹಾಜರುಪಡಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಅನಿರುದ್ದ್ ಶ್ರವಣ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಭ್ಯರ್ಥಿಗಳು ಮೊದಲ ಪರಿಶೀಲನೆಗಾಗಿ ಏ.5 ರಂದು, ಎರಡನೆಯ ಪರಿಶೀಲನೆಗಾಗಿ ಏ.10 ಹಾಗೂ ಮೂರನೇ ಪರಿಶೀಲನೆಗಾಗಿ ಏ.15 ರಂದು ಬೆಳಗ್ಗೆ 10:30ಕ್ಕೆ ಜಿಲ್ಲಾಡಳಿತ ಭವನದ ಎಚ್.ಎನ್.ಸಭಾಂಗಣದಲ್ಲಿ ಚುನಾವಣಾ ವೆಚ್ಚದ ದಾಖಲೆಗಳನ್ನು ಹಾಜರುಪಡಿಸಬೇಕು’ ಎಂದು ಹೇಳಿದರು.

‘ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಪ್ರಕರಣ 77(1) ರಲ್ಲಿ ಸೂಚಿಸಿರುವಂತೆ ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯು ಸ್ವತಃ ಅಥವಾ ತನ್ನ ಏಜೆಂಟನ ಮೂಲಕ ತಾನು ಚುನಾವಣಾ ಉದ್ದೇಶಕ್ಕಾಗಿ ಮಾಡುವ ದೈನಂದಿನ ಖರ್ಚು, -ವೆಚ್ಚಗಳ ವಿವರವಾದ ಲೆಕ್ಕಪತ್ರಗಳನ್ನು ಭಾಗ- ಎ, ಭಾಗ- ಬಿ ಹಾಗೂ ಭಾಗ- ಸಿ ವಹಿಗಳಲ್ಲಿ ನಿರ್ವಹಿಸಿ ಮತದಾನದ ಪೂರ್ವದಲ್ಲಿ ಚುನಾವಣಾ ವೆಚ್ಚ ವೀಕ್ಷಕರಿಗೆ ಪರಿಶೀಲನೆಗಾಗಿ ಹಾಜರುಪಡಿಸಬೇಕು’ ಎಂದರು.

‘ಚುನಾವಣಾ ವೆಚ್ಚದ ಲೆಕ್ಕಪತ್ರಗಳಿಗಾಗಿ ನಿಗದಿಪಡಿಸಿರುವ ನಮೂನೆಗಳಲ್ಲಿ ಮಾಹಿತಿ ಸಲ್ಲಿಸದ ಅಭ್ಯರ್ಥಿಗಳನ್ನು ಪ್ರಕರಣ 100 ಅನ್ವಯ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಲು ಚುನಾವಣಾ ಆಯೋಗಕ್ಕೆ ಅಧಿಕಾರವಿದೆ’ ಎಂದು ಹೇಳಿದರು.

ಅಂಚೆ ಮತದಾನಕ್ಕೆ ಅರ್ಜಿ ಸಲ್ಲಿಸಿ
‘ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಅಂಚೆ ಮತಪತ್ರಗಳ ಮುಖಾಂತರ ಮತದಾನ ಮಾಡಲು ನಮೂನೆ- 12ರಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಏ.11 ರಂದು ಸಂಜೆ 5ರ ಒಳಗೆ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಚುನಾವಣಾ ಕರ್ತವ್ಯದ ಪ್ರಮಾಣ ಪತ್ರ (ಇಡಿಸಿ) ಮುಖಾಂತರ ಮತದಾನ ಮಾಡಲು ನಮೂನೆ -12ಎ ನಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಏ.14 ರಂದು ಬೆಳಿಗ್ಗೆ 9ರ ಒಳಗಾಗಿ ಸಲ್ಲಿಸಬೇಕು’ ಜಿಲ್ಲಾ ಚುನಾವಣಾಧಿಕಾರಿ ಅನಿರುದ್ಧ್ ಶ್ರವಣ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !