ಬಾಗಲಕೋಟೆ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹9.54 ಲಕ್ಷ ವಶ

ಶುಕ್ರವಾರ, ಏಪ್ರಿಲ್ 19, 2019
27 °C

ಬಾಗಲಕೋಟೆ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹9.54 ಲಕ್ಷ ವಶ

Published:
Updated:

ಬಾಗಲಕೋಟೆ: ದಾಖಲೆಗಳು ಇಲ್ಲದೇ ಟಾಟಾ ಸುಮೊದಲ್ಲಿ ಸಾಗಿಸುತ್ತಿದ್ದ ₹9.54 ಲಕ್ಷ ನಗದು ಹಣವನ್ನು ಇಲ್ಲಿನ ಹೊನ್ನಾಕಟ್ಟಿ ಚೆಕ್‌ಪೋಸ್ಟ್‌ನಲ್ಲಿ ಮಂಗಳವಾರ ಗ್ರಾಮೀಣ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪಿಎಸ್‌ಐ ಆರ್.ಎನ್.ಮನಗೂಳಿ ನೇತೃತ್ವದಲ್ಲಿ ಹೆಡ್‌ಕಾನ್‌ಸ್ಟೆಬಲ್ ಶಿವಕುಮಾರ ಥೋರಟ್ ಹಾಗೂ ಸಿಬ್ಬಂದಿ ಪ್ರಕಾಶ ಲಮಾಣಿ ತಪಾಸಣೆ ಕಾರ್ಯ ಕೈಗೊಂಡಿದ್ದ ವೇಳೆ ಸಂಗಮಕ್ರಾಸ್ ಕಡೆಯಿಂದ ಬಂದ ಟಾಟಾ ಸುಮೊ ವಾಹನವನ್ನು ತಡೆದು ಪರಿಶೀಲನೆ ನಡೆಸಿದ್ದು ಅದರಲ್ಲಿ ನಗದು ಪತ್ತೆಯಾಗಿದೆ.

‘ಹಣ ಧರ್ಮಸ್ಥಳ ಸಂಘಕ್ಕೆ ಸೇರಿದೆ. ಸುತ್ತಲಿನ ಹಳ್ಳಿಗಳ ಸ್ವಸಹಾಯ ಸಂಘಗಳಿಂದ ಸಂಗ್ರಹಿಸಿ ಬ್ಯಾಂಕಿಗೆ ಕಟ್ಟಲು ಒಯ್ಯುತ್ತಿದ್ದೇವೆ ಎಂದು ಟಾಟಾ ಸುಮೊದಲ್ಲಿದ್ದವರು ಹೇಳಿದರು. ಆದರೆ ಅವರ ಬಳಿ ಪೂರಕ ದಾಖಲೆಗಳು ಇರಲಿಲ್ಲ. ಹಾಗಾಗಿ ಹಣ ಮುಟ್ಟುಗೋಲು ಹಾಕಿಕೊಂಡು ತಹಶೀಲ್ದಾರ್ ಅವರ ವಶಕ್ಕೆ ನೀಡಿದ್ದೇವೆ. ದಾಖಲೆಗಳನ್ನು ಸಲ್ಲಿಸಿ ಹಣ ಒಯ್ಯುವಂತೆ ಹೇಳಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ಕೂಡ ಭೇಟಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !