ಹಣ ಬಲ ವರ್ಸಸ್‌ ಜನ ಬಲದ ಚುನಾವಣೆ: ಮಲ್ಲಿಕಾರ್ಜುನ ವಿಶ್ಲೇಷಣೆ

ಬುಧವಾರ, ಏಪ್ರಿಲ್ 24, 2019
30 °C

ಹಣ ಬಲ ವರ್ಸಸ್‌ ಜನ ಬಲದ ಚುನಾವಣೆ: ಮಲ್ಲಿಕಾರ್ಜುನ ವಿಶ್ಲೇಷಣೆ

Published:
Updated:
Prajavani

ದಾವಣಗೆರೆ: ‘ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಮೂರು ತಿಂಗಳ ಮುಂಚೆಯೇ ಹೇಳಿದ್ದೆ. ಹೈಕಮಾಂಡ್ ಸೂಚಿಸಿದಂತೆ ಕೆಲಸ ಮಾಡುವುದಾಗಿ ತಿಳಿಸಿದ್ದೆ. ಹಾಗಾಗಿ, ಈ ಬಾರಿ ಸ್ಪರ್ಧಿಸಿಲ್ಲ. ಈಗ ಪಕ್ಷ ಪ್ರಾಮಾಣಿಕ ಕಾರ್ಯಕರ್ತ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಅವರಿಗೆ ಟಿಕೆಟ್‌ ಘೋಷಿಸಿದೆ. ಅವರನ್ನು ಗೆಲ್ಲಿಸುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರದ್ದು’ ಎಂದು ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಎಸ್‌.ಎಸ್. ಮಲ್ಲಿಕಾರ್ಜುನ ಸ್ಪಷ್ಟಪಡಿಸಿದರು.

ತಮ್ಮ ನಿವಾಸದಲ್ಲಿ ಬುಧವಾರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಭೇಟಿ ಮಾಡಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಪಡೆದೇ ಹೈಕಮಾಂಡ್‌ ಅಭ್ಯರ್ಥಿಯನ್ನು ಘೋಷಿಸಿದೆ ಎಂದು ಹೇಳಿದರು.

‘ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ತಡವಾಗಿದ್ದು ನಿಜ. ಆದರೆ, ತೇಜಸ್ವಿ ಪಟೇಲ್‌ ಅವರಿಗೆ ಟಿಕೆಟ್‌ ನಾನು ತಪ್ಪಿಸಿಲ್ಲ. ಮಂಜಪ್ಪ ಅವರಲ್ಲದೇ ಮೋಹನ ಕೊಂಡಜ್ಜಿ ಸಂಬಂಧಿಕರೊಬ್ಬರ ಹೆಸರೂ ಚಾಲ್ತಿಯಲ್ಲಿದ್ದವು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಇದು ಮಹತ್ವದ ಚುನಾವಣೆ. ಹಣ ಬಲ ವರ್ಸಸ್‌ ಜನ ಬಲದ ಚುನಾವಣೆ. ಕಾಂಗ್ರೆಸ್ಸಿಗೆ ಕಾರ್ಯಕರ್ತರೇ ಬೆನ್ನೆಲುಬು. ಜಿಲ್ಲೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ಪೂರಕವಾದ ವಾತಾವರಣವಿದೆ. ಜೆಡಿಎಸ್‌ ಜತೆಗಿನ ಮೈತ್ರಿ ಇನ್ನಷ್ಟು ಶಕ್ತಿ ತುಂಬಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿ ಅವರ ರೀತಿ ಮನೆ, ಮನೆಗೆ ಹೋಗಿ ಕಾರ್ಯಕರ್ತರನ್ನು ಎಬ್ಬಿಸುವ ಪ್ರಮೇಯ ಕಾಂಗ್ರೆಸ್‌ನಲ್ಲಿ ಇಲ್ಲ. ಒಂದು ಸೀಟಿ ಹೊಡೆದರೆ ಸಾವಿರಾರು ಕಾರ್ಯಕರ್ತರು ಸಜ್ಜಾಗಿ ನಿಲ್ಲುತ್ತಾರೆ’ ಎಂದು ಹೇಳಿದರು.

ಬಿಜೆಪಿಯದ್ದು ಹಣ ಬಲದ ಚುನಾವಣೆ

ಅಭ್ಯರ್ಥಿ ಎಚ್‌.‍ಪಿ. ಮಂಜಪ್ಪ ಮಾತನಾಡಿ, ಬಿಜೆಪಿ ಹಣದ ಬಲದಿಂದ ಚುನಾವಣೆ ಎದುರಿಸುತ್ತಿದೆ. ಆದರೆ, ಕಾಂಗ್ರೆಸ್‌ ಕಾರ್ಯಕರ್ತರ ಮೂಲಕ ಚುನಾವಣೆ ನಡೆಸುತ್ತದೆ. ಈಗಾಗಲೇ ಪ್ರತಿ ತಾಲ್ಲೂಕಿನಲ್ಲೂ ಸಿದ್ಧತಾ ಶಿಬಿರ, ಜನಸಂಪರ್ಕ ಸಭೆಗಳನ್ನು ನಡೆಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಮೋಹನ್ ಕೊಂಡಜ್ಜಿ, ಮಾಜಿ ಶಾಸಕರಾದ ವಡ್ನಾಳ್‌ ರಾಜಣ್ಣ, ಎಚ್‌.ಪಿ. ರಾಜೇಶ್, ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಮುಖಂಡರಾದ ಸೈಯದ್ ಸೈಫುಲ್ಲ, ಕೆ.ಎಸ್‌. ಬಸವಂತಪ್ಪ, ಎಚ್. ಹನುಮಂತಪ್ಪ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !