ಸೊಕ್ಕಿನಿಂದ ಮೆರೆಯುತ್ತಿರುವವರಿಗೆ ಪಾಠ ನಿಶ್ಚಿತ: ಬಿ.ಎಸ್.ಯಡಿಯೂರಪ್ಪ

ಮಂಗಳವಾರ, ಏಪ್ರಿಲ್ 23, 2019
31 °C

ಸೊಕ್ಕಿನಿಂದ ಮೆರೆಯುತ್ತಿರುವವರಿಗೆ ಪಾಠ ನಿಶ್ಚಿತ: ಬಿ.ಎಸ್.ಯಡಿಯೂರಪ್ಪ

Published:
Updated:
Prajavani

ಬಾಗಲಕೋಟೆ: ಸೊಕ್ಕಿನಿಂದ ಮೆರೆಯುತ್ತಿರುವವರಿಗೆ ಪಾಠ ಕಲಿಸಲು ನಾವು ಸುಮಲತಾಗೆ ಬೇಷರತ್ ಬೆಂಬಲ ಕೊಟ್ಟಿದ್ದೇವೆ. ಚುನಾವಣೆ ಬಳಿಕೆ ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬುದು ಅವರಿಗೆ ಬಿಟ್ಟ ವಿಚಾರ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸುಮಲತಾಗೆ ಜೆಡಿಎಸ್ ನಾಯಕರು ಅಪಮಾನ ಮಾಡುವುದು ದಿನೇ ದಿನೇ ಹೆಚ್ಚುತ್ತಿದೆ. ಇದು ಅವರ ಗೆಲುವಿಗೆ ಅನುಕೂಲವಾಗಲಿದೆ’ ಎಂದರು.

ತುಮಕೂರಿನಲ್ಲಿ ದೇವೇಗೌಡರು ತಮ್ಮ ಸೋಲನ್ನು ಒಪ್ಪಿಕೊಳ್ಳುವ ಸ್ಥಿತಿ ಬಂದಿದೆ. ಅಲ್ಲಿ ಪಕ್ಷದ ಅಭ್ಯರ್ಥಿ ಜಿ.ಎಸ್.ಬಸವರಾಜ್ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

‘ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆಲ್ಲಲಿದೆ. ಫಲಿತಾಂಶ ಬಂದ 24 ಗಂಟೆಯೊಳಗೆ ರಾಜ್ಯ ರಾಜಕೀಯದಲ್ಲೂ ತೀವ್ರತರವಾದ ಬದಲಾವಣೆ ಆಗಲಿದೆ’ ಎಂದು ಯಡಿಯೂರಪ್ಪ ಪುನರುಚ್ಚರಿಸಿದರು.

40 ನಿಮಿಷ ವಿಳಂಬ ಪ್ರಯಾಣ:‌ ಹಾವೇರಿಯಲ್ಲಿ ಶಿವಕುಮಾರ ಉದಾಸಿ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ಬಾಗಲಕೋಟೆಯಿಂದ ಹೊರಟರು. ಆದರೆ ತಾಂತ್ರಿಕ ತೊಂದರೆಯಿಂದ ಹೆಲಿಕಾಪ್ಟರ್ ಮೇಲೇರಲು ಡಿಡಿಸಿಎ ಅನುಮತಿ ಕೊಡಲಿಲ್ಲ. ಹೀಗಾಗಿ 40 ನಿಮಿಷಗಳ ಕಾಲ ನವನಗರದ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್‌ನಲ್ಲಿಯೇ ಕುಳಿತು ಯಡಿಯೂರಪ್ಪ ಕಾಲ ಕಳೆದರು. ಈ ವೇಳೆ ಶಾಸಕ ಮುರುಗೇಶ ನಿರಾಣಿ ಜೊತೆಗಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !