ಸಮಯಕ್ಕೇ ಸೆಡ್ಡು ಹೊಡೆದ ಮಾಲಿಂಗ!: 12 ತಾಸುಗಳಲ್ಲಿ ಎರಡು ತಂಡಗಳ ಪರ ಆಟ

ಶನಿವಾರ, ಏಪ್ರಿಲ್ 20, 2019
29 °C

ಸಮಯಕ್ಕೇ ಸೆಡ್ಡು ಹೊಡೆದ ಮಾಲಿಂಗ!: 12 ತಾಸುಗಳಲ್ಲಿ ಎರಡು ತಂಡಗಳ ಪರ ಆಟ

Published:
Updated:
Prajavani

ಮುಂಬೈ/ಕ್ಯಾಂಡಿ: ಶ್ರೀಲಂಕಾ ಕ್ರಿಕೆಟಿಗ ಲಸಿತ್ ಮಾಲಿಂಗ ಸಮಯಕ್ಕೆ ಸೆಡ್ಡು ಹೊಡೆದು ಗೆದ್ದಿದ್ದಾರೆ! 12 ತಾಸುಗಳ ಅವಧಿಯಲ್ಲಿ ಎರಡು ತಂಡಗಳಿಗೆ ಆಡಿ ಒಟ್ಟು ಹತ್ತು ವಿಕೆಟ್‌ಗಳನ್ನು ಕಬಳಿಸಿದ ಸಾಧನೆ ಮಾಡಿದ್ದಾರೆ.

ಬುಧವಾರ ತಡರಾತ್ರಿ ಮುಕ್ತಾಯ ವಾದ ಐಪಿಎಲ್ ಪಂದ್ಯದಲ್ಲಿ ಅವರು ಮುಂಬೈ ಇಂಡಿಯನ್ಸ್‌ ಪರ (34ಕ್ಕೆ3) ಬೌಲಿಂಗ್ ಮಾಡಿದ್ದರು. ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಗೆಲುವಿಗೂ ಕಾಣಿಕೆ ನೀಡಿದ್ದರು. ಗುರುವಾರ ಮಧ್ಯಾಹ್ನ ತಮ್ಮ ತವರು ದೇಶದ ಕ್ಯಾಂಡಿಯಲ್ಲಿ ನಡೆದ ಸೂಪರ್ ಫೋರ್ ಲಿಸ್ಟ್ ’ಎ’ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಗಾಲ್ ತಂಡದ ಪರ ಏಳು ವಿಕೆಟ್ ಕಬಳಿಸಿದರು. 49 ರನ್‌ಗಳನ್ನು ಬಿಟ್ಟುಕೊಟ್ಟರು.

ರಾತ್ರಿ ಮುಂಬೈನಲ್ಲಿ ಪಂದ್ಯ ಮುಗಿಸಿದ ಅವರು ವಿಮಾನ ಮೂಲಕ ಕೊಲಂಬೊ ತೆರಳಿ, ಅಲ್ಲಿಂದ ಗುರುವಾರ ಬೆಳಗಿನ ಜಾವ ಕ್ಯಾಂಡಿ ತಲುಪಿದರು. ಲಿಸ್ಟ್‌ ’ಎ’ ಕ್ರಿಕೆಟ್‌ನಲ್ಲಿ ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ಆಡುವ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆಯೇ ಮಾಲಿಂಗ ಅವರಿಗೆ ಐಪಿಎಲ್‌ನಲ್ಲಿ ಆಡಲು ಶ್ರೀಲಂಕಾ ಕ್ರಿಕೆಟ್ ಸಂಸ್ಥೆಯು ಅನುಮತಿ ನೀಡಿತ್ತು. ಈ ಪಂದ್ಯದಲ್ಲಿ ಗಾಲ್ ತಂಡವು ಕ್ಯಾಂಡಿ ತಂಡವನ್ನು 156 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಗಾಲ್ ತಂಡವು 255 ರನ್ ಗಳಿಸಿತ್ತು. 

ವಿಶ್ವಕಪ್ ಟೂರ್ನಿಯಲ್ಲಿ ಆಡುವ ಆಟಗಾರರು ಐಪಿಎಲ್‌ನಲ್ಲಿ ಹೆಚ್ಚು ಪಂದ್ಯಗಳನ್ನು ಆಡಬೇಕೆ ಬೇಡವೇ ಎಂಬ ಚರ್ಚೆಗಳು ನಡೆದಿರುವ ಸಂದರ್ಭದಲ್ಲಿ 35 ವರ್ಷದ ಮಾಲಿಂಗ ಅವರ ಈ ಸಾಧನೆಯು ಗಮನ ಸೆಳೆದಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !