ಮುತ್ತಣ್ಣನ ಮಿರ್ಚಿ ಭಜಿಯ ಗಮತ್ತು

ಬುಧವಾರ, ಏಪ್ರಿಲ್ 24, 2019
32 °C
ನಮ್ಮೂರ ಆಹಾರ

ಮುತ್ತಣ್ಣನ ಮಿರ್ಚಿ ಭಜಿಯ ಗಮತ್ತು

Published:
Updated:
Prajavani

ಹುನಗುಂದ: ಪಟ್ಟಣದ ಮುಖ್ಯ ಬಜಾರದಲ್ಲಿ ಗರಡಿ ಮನೆ ಹತ್ತಿರ ಮುತ್ತಣ್ಣ ತೊಂಡಿಹಾಳ ತಯಾರಿಸುವ ಮಿರ್ಚಿ ಭಜಿಯ ರುಚಿಗೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಮಾರು ಹೋಗದವರೇ ಇಲ್ಲ. ಮುತ್ತಣ್ಣನ ಭಜಿ ಎಂದರೇ ಎಲ್ಲರ ಬಾಯಲ್ಲೂ ನೀರು.
ನಿತ್ಯ ಸಾಯಂಕಾಲ 5ಗಂಟೆಗೆ ಮುತ್ತಣ್ಣ ಭಜಿ ತಯಾರಿಸಲು ಆರಂಭಿಸಿ ರಾತ್ರಿ 10ಗಂಟೆವರೆಗೆ ಮಾಡುತ್ತಾರೆ. ಇವರ ತಯಾರಿಸುವ ಭಜಿಗೆ ಎಷ್ಟು ಬೇಡಿಕೆ ಇದೇ ಎಂದರೇ ಕರಿದು ಎಣ್ಣೆಯಿಂದ ಹೊರತೆಗೆಯುತ್ತಿದ್ದಂತೆ ಖಾಲಿಯಾಗುತ್ತವೆ. ಗ್ರಾಹಕರು ಬೇಸರಿಸಿಕೊಳ್ಳದೇ ಒಂದಿಷ್ಟು ಹೊತ್ತು ಕಾಯ್ದು ಬಿಸಿ ಬಿಸಿ ಭಜಿ ಖರೀದಿಸುತ್ತಾರೆ.

ಕೆಲವರು ಅಲ್ಲೇ ನಿಂತು ಭಜಿ ಸವಿದರೇ, ಇನ್ನು ಕೇಲವರು ಪಾರ್ಸೆಲ್ ಒಯ್ಯುತ್ತಾರೆ.

ರುಚಿಯಷ್ಟೇ ಶುಚಿಗೂ ಮಹತ್ವ ನೀಡುವ ಮುತ್ತಣ್ಣ ಆಯ್ದ ಹಸಿಮೆಣಸಿಕಾಯಿ, ಗುಣಮಟ್ಟದ ಖಾದ್ಯ ತೈಲ ಹಾಗೂ ಶುದ್ಧ ಕಡಲೆ ಹಿಟ್ಟು ಬಳಸುವುದಾಗಿ ಹೇಳುತ್ತಾರೆ. ದಿನಕ್ಕೆ 20 ಕೆ.ಜಿ ಹಿಟ್ಟು, ಸ್ವಲ್ಪ ಸೋಡಾಪುಡಿ, ಅಜವಾನ ಮತ್ತು ಉಪ್ಪು ಹಾಕಿ ಬಜ್ಜಿ ಮಾಡುತ್ತಾರೆ. ಆಲೂಗಡ್ಡೆ ಭಜಿ ಕೂಡಾ ಮಾಡುತ್ತಾರೆ. ಇವರಲ್ಲಿ ಭಜಿಯ ದರ ತೀರಾ ಕಡಿಮೆ. 10 ರೂಪಾಯಿಗೆ 8 ಭಜಿ ನೀಡುತ್ತಾರೆ. ಹಳ್ಳಿ ಜನರಿಗೂ ಮುತ್ತಣನ ಭಜಿ ಎಂದರೇ ಇಷ್ಟ. ಸಂತೆ ದಿನವಾದ ಶನಿವಾರ ನಿತ್ಯಕ್ಕಿಂತ ಹೆಚ್ಚು ಬೇಡಿಕೆ ಇರುತ್ತದೆ.

ಮೂಲತಃ ಕೃಷಿಕನಾಗಿರುವ ಮುತ್ತಣ್ಣ, 20ವರ್ಷದಿಂದ ಉಪಕಸುಬಾಗಿ ಭಜಿ ಮಾಡಿ ಮಾರುವ ಉದ್ಯೋಗ ಮಾಡುತ್ತಿದ್ದಾರೆ. ಅವರಿಗೆ ಪತ್ನಿ, ಅಳಿಯ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಸಂಗಪ್ಪ ತೊಂಡಿಹಾಳ ಸಂ‍ಪರ್ಕ ಸಂಖ್ಯೆ: 9739564729. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !