ಯೋಜನೆಗಳಿಂದ ಸಾಕ್ಷರತೆ ಪ್ರಮಾಣ ಏರಿಕೆ: ಡಿ.ಆರ್.ರಾಜಪ್ಪ

ಶನಿವಾರ, ಏಪ್ರಿಲ್ 20, 2019
29 °C

ಯೋಜನೆಗಳಿಂದ ಸಾಕ್ಷರತೆ ಪ್ರಮಾಣ ಏರಿಕೆ: ಡಿ.ಆರ್.ರಾಜಪ್ಪ

Published:
Updated:
Prajavani

ಮಾಲೂರು: ದೇಶದಲ್ಲಿ ಅನಕ್ಷರತೆ ಹೋಗಲಾಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರಿಂದ ಸಾಕ್ಷರೆತೆಯ ಪ್ರಮಾಣ ಏರಿಕೆಯಾಗಲು ಸಾಧ್ಯವಾಗಿದೆ ಎಂದು ಜಿಲ್ಲಾ ಸಾಕ್ಷರತಾ ಸಮಿತಿಯ ಸಂಯೋಜಕ ಡಿ.ಆರ್.ರಾಜಪ್ಪ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ತಾಲ್ಲೂಕು ಪ್ರೇರಕರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಅನಕ್ಷರಸ್ಥರು, ಬಡವರು ಮತ್ತು ಕೂಲಿ ಕಾರ್ಮಿಕರು ಸಮಾಜದ ಮುಖ್ಯ ವಾಹಿನಿಗೆ ಬರುವುದರ ಜತೆಗೆ ಸಾಕ್ಷರತೆ ಪಡೆದಾಗ ಮಾತ್ರ ಈ ಯೋಜನೆ ಸಫಲತೆ ಹೊಂದುತ್ತದೆ ಎಂದರು. 

ಸಾಕ್ಷರತ ಕಾರ್ಯಕ್ರಮದಲ್ಲಿ ಪ್ರೇರಕರು ಸ್ವಯಂ ಪ್ರೇರಣೆಯಿಂದ ಹಲವಾರು ವರ್ಷಗಳಿಂದ ತೊಡಿಗಿಸಿಕೊಂಡಿದ್ದು, ಕೇವಲ ಗೌರವಧನ ಮೇಲೆ ಕೆಲಸ ಮಾಡುತ್ತಿದ್ದಾರೆ. ಇದರಿಂದ ಜಿಲ್ಲೆಯ ಸಾಕ್ಷರತೆ ಶೇ 75 ಕ್ಕೆ ಏರಿಕೆಯಾಗಿದೆ ಎಂದರು.

ಜಿಲ್ಲಾ ಸಂಯೋಜಕ ರಾಜಣ್ಣ ಮಾತನಾಡಿ, ಜಿಲ್ಲೆಯಲ್ಲಿ ಸಾಕ್ಷರತಾ ಕಾರ್ಯಕ್ರಮದಲ್ಲಿ ಪ್ರೇರಕರು ಉತ್ತಮ ರೀತಿಯಲ್ಲಿ ತೊಡಗಿಸಿಕೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನಿಡಿದ್ದಾರೆ. ಕಳೆದ 2 ವರ್ಷಗಳಿಂದ ಕಾರ್ಯಕ್ರಮ ಸ್ಥಗಿತಗೊಂಡಿದ್ದರೂ ಸಹ ಪ್ರೇರಕರು ಕೇಂದ್ರಗಳನ್ನು ತೆರೆದು ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ತಾಲ್ಲೂಕಿನಲ್ಲಿ 5 ಗ್ರಾಮ ಪಂಚಾಯಿತಿಗಳಲ್ಲಿ ಮೂಲ ಸಾಕ್ಷರತಾ ಯೋಜನೆ ಅನುಷ್ಠಾನದಲ್ಲಿದ್ದು, ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ತಿಳಿಸಿದರು.

ಅನಿಕೇತನ ಸಾಂಸ್ಕೃತಿಕ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಕೆ.ಮುನಿಕೃಷ್ಣಪ್ಪ, ತಾಲ್ಲೂಕು ಸಂಯೋಜಕ ರಾಮಾಂಜಿನಪ್ಪ, ಶ್ರೀನಿವಾಸ್ ಮಾತನಾಡಿದರು.

ಈ ವೇಳೆ ತಾಲ್ಲೂಕು ಸಾಕ್ಷರತ ಸಂಯೋಜಕರಾಗಿ ಉತ್ತಮ ಕೆಲಸ ಮಾಡಿದ ವಿ.ಭಾಲಕೃಷ್ಣ ಹಾಗೂ ಡೆಹರಾಡೋನ್‌ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ 200 ಮೀ ವಿಭಾಗದ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ತಾಲ್ಲೂಕು ಪ್ರೇರಕರಾಗಿ ಕೆಲಸ ಮಾಡುತ್ತಿರುವ ಶ್ರೀನಿವಾಸಯ್ಯ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಸ್.ನಾಗೇಶ್, ಕಾರ್ಯದರ್ಶಿ ಕೆ.ಪಿ.ರಮೇಶ್, ಪ್ರೇರಕರಾದ ಚಂದ್ರಶೇಕರ್, ವಿ.ಶ್ರೀನಿವಾಸ್, ಸುಬ್ರಮಣಿ ರೆಡ್ಡಿ, ಮಾದೇಶ್, ಸುಗುಣಮ್ಮ, ಅಲುಮೇಲಮ್ಮ, ಗಾಯತ್ರಮ್ಮ, ನಾರಾಯಣಸ್ವಾಮಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !