ರೈಲ್ವೆ ಹಳಿ ಬಳಿ ಮೃತ ದೇಹಗಳ ಪತ್ತೆ

ಮಂಗಳವಾರ, ಏಪ್ರಿಲ್ 23, 2019
31 °C

ರೈಲ್ವೆ ಹಳಿ ಬಳಿ ಮೃತ ದೇಹಗಳ ಪತ್ತೆ

Published:
Updated:

ಕಾಸರಗೋಡು: ತ್ರಿಕರಿಪುರದಲ್ಲಿ ರೈಲ್ವೆ ಹಳಿಯ ಬಳಿಯ ಕುರುಚಲು ಕಾಡಿನಲ್ಲಿ ಇಬ್ಬರ ಮೃತ ದೇಹ ಶುಕ್ರವಾರ ಪತ್ತೆಯಾಗಿವೆ. ತ್ರಿಕರಿಪುರದಿಂದ ಎರಡು ದಿನಗಳ ಹಿಂದೆ ಕಾಣೆಯಾದ ಅಣ್ಣ - ತಮ್ಮಂದಿರ ಮೃತ ದೇಹ ಎಂದು ಶಂಕಿಸಲಾಗಿದೆ.

ಶವಗಳು ಸಂಪೂರ್ಣ ಛಿದ್ರಗೊಂಡಿದ್ದು,  ಎರಡು ದಿನದ ಹಿಂದೆಯೇ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಇಳಂಬಚ್ಚಿ ಕ್ರೀಡಾಂಗಣ ಬಳಿಯ ನಿವಾಸಿ ಹಾಗೂ ಪತ್ರಿಕಾ ವಿತರಕರಾದ ವೇಲಾಯುಧನ್ ಎಂಬುವವರ ಮಕ್ಕಳಾದ ಸ್ವಾಮಿನಾಥನ್ (44), ಸೋಮನ್ (40) ಅವರು ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಚಂದೇರ ಪೊಲೀಸರು ತಿಳಿಸಿದ್ದಾರೆ.

ಹಂದಿ ತಿವಿದು ಮಹಿಳೆ ಗಂಭೀರ
ಗೇರು ಬೀಜ ನಿಗಮದ ಗೇರು ತೋಟದಲ್ಲಿ ಕೆಲಸದಲ್ಲಿ ನಿರತ ಮಹಿಳೆಯೊಬ್ಬರಿಗೆ ಕಾಡು ಹಂದಿ ತಿವಿದು ಗಂಭೀರ ಗಾಯಗೊಂಡಿದ್ದಾರೆ. ಅದೂರು ಬೆಳ್ಳೂರಡ್ಕ ನಿವಾಸಿ ಸೀತೆ (43 ) ಹಂದಿ ದಾಳಿಗೆ ಒಳಗಾದವರು.

ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶುಕ್ರವಾರ ಆದೂರು ಗೇರು ತೋಟದಲ್ಲಿ ಕೆಲಸದಲ್ಲಿ ನಿರತರಾಗಿದ್ದ ಅವರ ಮೇಲೆ ಸಮೀಪದ ಕುರುಚಲು ಕಾಡಿನಿಂದ ಓಡಿ ಬಂದ ಹಂದಿ ತಿವಿದಿತ್ತು. ಜತೆಯಲ್ಲಿದ್ದ ಕಾರ್ಮಿಕರು ಮಹಿಳೆಯನ್ನು ಆಸ್ಪತ್ರೆಗೆ ಕೊಂಡೊಯ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !