ಬಿಜೆಪಿ ಸೇರುವ ಪ್ರಸ್ತಾವ ಇಲ್ಲ: ಸುಮಲತಾ

ಮಂಗಳವಾರ, ಏಪ್ರಿಲ್ 23, 2019
31 °C

ಬಿಜೆಪಿ ಸೇರುವ ಪ್ರಸ್ತಾವ ಇಲ್ಲ: ಸುಮಲತಾ

Published:
Updated:

ಮಂಡ್ಯ: ‘ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ ಸೇರುವ ಯಾವುದೇ ಪ್ರಸ್ತಾವ ಇಲ್ಲ. ಮಂಡ್ಯದ ಬೆಳವಣಿಗೆಯನ್ನು ಗಮನಿಸಿ ಬಿಜೆಪಿ ನನಗೆ ಬೆಂಬಲ ನೀಡಿದೆ’ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಶುಕ್ರವಾರ ಹೇಳಿದರು.

ನಗರದ ಗುತ್ತಲು ಬಡಾವಣೆಗಳಲ್ಲಿ ನಡೆದ ಮುಸ್ಲಿಂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ನಾನು ಬಿಜೆಪಿ ಸೇರುತ್ತೇನೆ ಎಂಬುದು ಕೇವಲ ಊಹಾಪೋಹ. ನನ್ನ ಮೊದಲ ಆದ್ಯತೆ ಕಾಂಗ್ರೆಸ್‌ ಪಕ್ಷ ಆಗಿತ್ತು. ಟಿಕೆಟ್‌ ನೀಡದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ಗೆದ್ದ ನಂತರ ಬಿಜೆಪಿ ಸೇರುವುದು, ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಬಿ.ಎಸ್‌.ಯಡಿಯೂರಪ್ಪ ಅವರೇ ಹೇಳಿದ್ದಾರೆ’ ಎಂದರು.

‘ಬಿಜೆಪಿಗೆ ಹೋಗುವುದಿದ್ದರೆ ಮೊದಲೇ ಹೋಗಬಹುದಾಗಿತ್ತು. ಮುಂದೆ ಯಾವುದೇ ನಿರ್ಧಾರ ಕೈಗೊಳ್ಳುವುದಿದ್ದರೂ ನಿಮ್ಮನ್ನು ಕೇಳಿಯೇ ತೀರ್ಮಾನಿಸುತ್ತೇನೆ ಎಂದರು. ಮುಸ್ಲಿಂ ಬಡಾವಣೆಗಳಲ್ಲಿ ಉರ್ದು ಭಾಷೆಯಲ್ಲೇ ಮತಯಾಚನೆ ಮಾಡಿದರು.

ಬರಹ ಇಷ್ಟವಾಯಿತೆ?

  • 6

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !