ಯುವಕ ಆತ್ಮಹತ್ಯೆ

ಮಂಗಳವಾರ, ಏಪ್ರಿಲ್ 23, 2019
25 °C

ಯುವಕ ಆತ್ಮಹತ್ಯೆ

Published:
Updated:

ಮಂಗಳೂರು: ನಗರದ ಕುಂಜತ್ತ್‍ಬೈಲ್‍ನಲ್ಲಿ ಯುವಕನೊಬ್ಬ ಗುರುವಾರ ರಾತ್ರಿ ಮನೆಯ ಚಾವಣಿಯ ಪಕ್ಕಾಸಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಮಿಳುನಾಡಿನವನಾಗಿದ್ದು, ಕುಂಜತ್ತಬೈಲ್ ಜ್ಯೋತಿನಗರದಲ್ಲಿ ನಿವಾಸಿ ಹರೀಶ್ (25) ಮೃತಪಟ್ಟ ಯುವಕ. ಇವರು ಕಟ್ಟಡಗಳ ಪೇಂಟಿಂಗ್‌ ಮತ್ತು ಟೈಲ್ಸ್ ಅಳವಡಿಸುವ ಕೆಲಸ ಮಾಡುತ್ತಿದ್ದರು.

ಗುರುವಾರ ರಾತ್ರಿ ಮನೆಯಲ್ಲಿ ಎಲ್ಲರೊಂದಿಗೆ ಊಟ ಮಾಡಿ ಮಲಗಿದ್ದರು. ತಂದೆಯೊಂದಿಗೆ ಮಲಗಿದ್ದ ಇವರು ರಾತ್ರಿ ವೇಳೆ ಮನೆಯ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ಎಂದು ತಿಳಿದು ಬಂದಿಲ್ಲ. ಮೃತ ಯುವಕನಿಗೆ ಅಪ್ಪ, ಅಮ್ಮ, ತಮ್ಮ, ತಂಗಿ ಇದ್ದಾರೆ.

ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 2

    Sad
  • 0

    Frustrated
  • 0

    Angry

Comments:

0 comments

Write the first review for this !