ಮಂಡ್ಯ: ಮತಯಂತ್ರದಲ್ಲಿ ಸುಮಲತಾ ಭಾವಚಿತ್ರ ಗೊಂದಲ ಸೃಷ್ಟಿ

ಭಾನುವಾರ, ಏಪ್ರಿಲ್ 21, 2019
32 °C

ಮಂಡ್ಯ: ಮತಯಂತ್ರದಲ್ಲಿ ಸುಮಲತಾ ಭಾವಚಿತ್ರ ಗೊಂದಲ ಸೃಷ್ಟಿ

Published:
Updated:
Prajavani

ಮಂಡ್ಯ: ವಿದ್ಯುನ್ಮಾನ ಮತಯಂತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಸುಮಲತಾ ಅಂಬರೀಷ್‌ ಹಾಗೂ ಸುಮಲತಾ (ಟಿ.ಎಂ.ಹೊಸೂರು ಗ್ರಾಮ)ಅವರ ಭಾವಚಿತ್ರಗಳು ಒಂದೇ ರೀತಿಯಲ್ಲಿರುತ್ತವೆ ಎಂಬ ಸುದ್ದಿ ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಕ್ರಮಸಂಖ್ಯೆ 19ರಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು, ಟಿ.ಎಂ.ಹೊಸೂರು ಗ್ರಾಮದ ಸುಮಲತಾ ಅವರ ಭಾವಚಿತ್ರವಿದೆ. ಕ್ರಮಸಂಖ್ಯೆ 20ರಲ್ಲಿ ಸುಮಲತಾ ಅಂಬರೀಷ್‌ ಅವರ ಭಾವಚಿತ್ರವಿದೆ. ಸುಮಲತಾ ಅಂಬರೀಷ್‌ ಅವರಂತೆ ಕಾಣುವ ರೀತಿಯಲ್ಲಿ ಹೊಸೂರು ಗ್ರಾಮದ ಸುಮಲತಾಗೆ ಮೇಕಪ್‌ ಮಾಡಿಸಿ, ಸೀರೆ, ರವಿಕೆ ತೊಡಿಸಿ, ಕನ್ನಡಕ ಹಾಕಿಸಿ ಭಾವಚಿತ್ರ ತೆಗೆಸಲಾಗಿದೆ. ಮತದಾರರು ಸುಮಲತಾ ಅಂಬರೀಷ್‌ ಅವರನ್ನು ಗುರುತಿಸಲು ಸಾಧ್ಯವಾಗದಂತೆ ಗೊಂದಲ ಸೃಷ್ಟಿಸಲಾಗಿದೆ. ಎರಡೂ ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಈ ಕುರಿತು ಮಾಹಿತಿ ಪಡೆಯಲು ಜಿಲ್ಲಾ ಚುನಾವಣಾಧಿಕಾರಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.

 

 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 26

  Angry

Comments:

0 comments

Write the first review for this !