ಮೋದಿ ನೀಡಿದ ಭರವಸೆಗಳು ಈಡೇರಿಲ್ಲ: ಕಾಂಗ್ರೆಸ್‌ ನಾಯಕಿ ಡಾ.ಆರತಿಕೃಷ್ಣ

ಬುಧವಾರ, ಏಪ್ರಿಲ್ 24, 2019
31 °C

ಮೋದಿ ನೀಡಿದ ಭರವಸೆಗಳು ಈಡೇರಿಲ್ಲ: ಕಾಂಗ್ರೆಸ್‌ ನಾಯಕಿ ಡಾ.ಆರತಿಕೃಷ್ಣ

Published:
Updated:
Prajavani

ಬಾಳೆಹೊನ್ನೂರು: ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರು ಹಾಗೂ ವಿವಿಧ ಮುಖಂಡರ ಜತೆ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ಪರ ಇದೇ 12ರ ವರೆಗೆ ಮತ ಪ್ರಚಾರ ನಡೆಸುತ್ತೇನೆ ಎಂದು ಕಾಂಗ್ರೆಸ್‌ ನಾಯಕಿ ಡಾ.ಆರತಿಕೃಷ್ಣ ತಿಳಿಸಿದರು.

ಶನಿವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ‘ನಾನೂ ಕೂಡ ಕಾಂಗ್ರೆಸ್ ಲೋಕಸಭಾ ಚುನಾವಣಾ ಆಕಾಂಕ್ಷಿಯಾಗಿದ್ದೆ. ಆದರೆ, ಮೈತ್ರಿ ಪಕ್ಷದ ಅಭ್ಯರ್ಥಿ ಸ್ಪರ್ಧಿಸಲು ಹೈಕಮಾಂಡ್ ನಿರ್ಧರಿಸಿದ ಹಿನ್ನೆಲೆಯಲ್ಲಿ ಇದೀಗ ಅವರ ಪರ ಪ್ರಚಾರದಲ್ಲಿ ತೊಡಗಿದ್ದೇನೆ. ಶೋಭಾ ಕರಂದ್ಲಾಜೆ ಅವರು ಕ್ಷೇತ್ರದ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿಲ್ಲ ಎಂಬ ದೂರಿದೆ. ವಿಶೇಷವಾಗಿ ಕಸ್ತೂರಿ ರಂಗನ್ ವರದಿ ಮಂಡನೆ, ಕಾಳುಮೆಣಸು ಬೆಲೆ ಇಳಿಕೆಯಂತಹ ಸಂದರ್ಭದಲ್ಲೂ ಇಲ್ಲಿನ ರೈತರು ಬೆಳೆಗಾರರೊಂದಿಗೆ ಸಂಪರ್ಕ ಹೊಂದದೆ ನಿರ್ಲಕ್ಷ್ಯ ವಹಿಸಿದ್ದು ಪ್ರಮೋದ್ ಮಧ್ವರಾಜ್ ಗೆಲುವಿಗೆ ಕಾರಣವಾಗಲಿದೆ’ ಎಂದರು.

‘ಇಲ್ಲಿನ ಚುನಾವಣೆ ನಂತರ ರಾಹುಲ್ ಗಾಂಧಿ ಸ್ಪರ್ಧಿಸಿರುವ ಕೇರಳದ ವಯನಾಡ್ ನಲ್ಲಿ ಇದೇ 16ರಿಂದ ಐದು ದಿನಗಳ ಕಾಲ ಪ್ರಚಾರ ಮುಂದುವರಿಸಲಿದ್ದೇನೆ. ಹಿಂದಿನ ಚುನಾವಣೆ ವೇಳೆ ಮೋದಿ ನೀಡಿದ್ದ ಹಲವು ಭರವಸೆಗಳು ಈಡೇರಿಲ್ಲ. ಮೂರು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾದಿಸಿದ್ದು, ರಾಹುಲ್ ಗಾಂಧಿಯವರನ್ನು ಮುಂದಿನ ಪ್ರಧಾನಮಂತ್ರಿಯನ್ನಾಗಿ ಮಾಡುವುದೇ ನಮ್ಮ ಉದ್ದೇಶವಾಗಿದೆ’ ಎಂದರು.

ಅನಿವಾಸಿ ಭಾರತೀಯರ ಮನಸಲ್ಲೂ ಕಾಂಗ್ರೆಸ್ ಪಕ್ಷದ ಬಗ್ಗೆ ಒಲವಿದೆ. ಇತ್ತೀಚೆಗೆ ಅಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಗೆ 60 ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದು ಇದಕ್ಕೆ ಸಾಕ್ಷಿ ಎಂದರು.

ಅನಿವಾಸಿ ಭಾರತೀಯ ಉದ್ಯಮಿ ಅಬ್ದುಲ್ ಶಕೀಲ್ ಮಾತನಾಡಿ, ‘ಡಾ.ಆರತಿಕೃಷ್ಣ ಅವರಿಗೆ ಉಡುಪಿ– ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಕೈ ತಪ್ಪಿರುವುದು ಸಾವಿರಾರು ಎನ್‍ಆರ್‌ಐಗಳಿಗೆ ಬೇಸರವಾಗಿದೆ. ನಾವು ಮಿಥುನ್ ರೈ ಹಾಗೂ ಪ್ರಮೋದ್ ಮಧ್ವರಾಜ್ ಪರ ಪ್ರಚಾರ ನಡೆಸಲಿದ್ದೇವೆ. ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಅನಿವಾಸಿ ಭಾರತೀಯರ ಅನುಕೂಲಕ್ಕಾಗಿ ಮೂರು ಕಾರ್ಯಕ್ರಮಗಳನ್ನು ಸೇರ್ಪಡೆಗೊಳಿಸಿರುವುದು ಸ್ವಾಗತಾರ್ಹ. ಬೇರೆ ಬೇರೆ ದೇಶಗಳಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಕ್ಷೇತ್ರಕ್ಕೆ ಹಲವರು ಬರಲಿದ್ದಾರೆ. ಚುನಾವಣೆ ಮುಗಿದ ನಂತರ ಡಾ.ಆರತಿಕೃಷ್ಣ ಅವರನ್ನು ರಾಜ್ಯಸಭಾ ಸದಸ್ಯೆ ಮಾಡುವಂತೆ ಎನ್‍ಆರ್‌ಐ ನಿಯೋಗವೊಂದು ರಾಹುಲ್ ಗಾಂಧಿಯವರನ್ನು ಬೇಟಿ ಮಾಡಿ ಒತ್ತಾಯಿಸಲಿದೆ’ ಎಂದರು.

ಡಾ.ಆರತಿಕೃಷ್ಣ ನೇತೃತ್ವದಲ್ಲಿ ಅನಿವಾಸಿ ಭಾರತೀಯರು ಪೇಟೆಕೇರಿ ಕಾಲೋನಿಯ ಮನೆ ಮನೆಗೆ ತೆರಳಿ ಮತಯಾಚಿಸಿದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶೀ ಮಾಗುಂಡಿಯ ಅಬ್ದುಲ್ ವಹೀದ್ ಆಹಮ್ಮದ್, ಅನಿವಾಸಿ ಭಾರತೀಯರಾದ ಮಹಮ್ಮದ್ ಇಕ್ಬಾಲ್, ಸಾಜೀದ್ ಸಾಮ್ರಾನ್, ಮೊಹಮ್ಮದ್ ಸಾಧೀಕ್, ಮಾಗುಂಡಿ ಸಲಾಂ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !