ದುರ್ಗಮ್ಮ ದೇವಿಗೆ ಬಂಗಾರದ ಕಾಣಿಕೆ ನೀಡಿದ ಮುಸ್ಲಿಂ ಕುಟುಂಬ

ಶುಕ್ರವಾರ, ಏಪ್ರಿಲ್ 26, 2019
33 °C

ದುರ್ಗಮ್ಮ ದೇವಿಗೆ ಬಂಗಾರದ ಕಾಣಿಕೆ ನೀಡಿದ ಮುಸ್ಲಿಂ ಕುಟುಂಬ

Published:
Updated:
Prajavani

ನ್ಯಾಮತಿ: ಸಮೀಪದ ಕುರುವ ಗಡ್ಡೆ ರಾಮೇಶ್ವರ ದೇವಸ್ಥಾನ ದುರ್ಗಮ್ಮ ದೇವಿಗೆ ಮುಸ್ಲಿಂ ಕುಟುಂಬದವರು ಪೂಜೆ ನೆರವೇರಿಸಿ, ಕಾಣಿಕೆ ರೂಪವಾಗಿ ಬಂಗಾರದ ಎರಡು ತಾಳಿ, ಒಂದು ಬಂಗಾರದ ಗುಂಡನ್ನು ಶನಿವಾರ ಅರ್ಪಿಸಿದರು.

ಸಾಸ್ವೇಹಳ್ಳಿ ಮೂಲದ ಪ್ಯಾರಿಜಾನ್ ಆರೀಫ್‌ ಸಾಬ್ ಕುಟುಂಬ ಹಾಲಿ ಭದ್ರಾವತಿ ತಾಲ್ಲೂಕು ಸಿದ್ಲಿಪುರ ಗ್ರಾಮದಲ್ಲಿ ವಾಸವಾಗಿದೆ. ಮೊದಲಿನಿಂದಲೂ ರಾಮೇಶ್ವರ ದೇವಸ್ಥಾನ ಮತ್ತು ದುರ್ಗಾದೇವಿಯ ಭಕ್ತರಾಗಿದ್ದು, ರಥೋತ್ಸವಕ್ಕೆ ಕುಟುಂಬ ಸಮೇತರಾಗಿ ತಪ್ಪದೇ ಬರುತ್ತಾರೆ.

ಈ ಬಾರಿ ವಿಶೇಷವಾಗಿ ಬಂಗಾರದ ಕಾಣಿಕೆ ನೀಡಿ ಪೂಜೆ ನೆರವೇರಿಸಿದ್ದಾರೆ ಎಂದು ಆರ್ಚಕ ಕುಮಾರಭಟ್ಟರು ತಿಳಿಸಿದರು.
 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !