ಮಂಡ್ಯ: ಶಾಂತಿಯುತ ಚುನಾವಣೆಗೆ 16 ರೌಡಿ ಶೀಟರ್‌ಗಳ ಗಡಿಪಾರು

ಮಂಗಳವಾರ, ಏಪ್ರಿಲ್ 23, 2019
33 °C

ಮಂಡ್ಯ: ಶಾಂತಿಯುತ ಚುನಾವಣೆಗೆ 16 ರೌಡಿ ಶೀಟರ್‌ಗಳ ಗಡಿಪಾರು

Published:
Updated:

ಮಂಡ್ಯ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಯ ವ್ಯಾಪ್ತಿಯ 16 ಮಂದಿ ರೌಡಿಶೀಟರ್‌ಗಳನ್ನು ಜಿಲ್ಲಾ ವ್ಯಾಪ್ತಿಯಿಂದ ಗಡಿಪಾರು ಮಾಡಿ ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಸೋಮವಾರ ಆದೇಶ ಹೊರಡಿಸಿದ್ದಾರೆ.

ಮಂಡ್ಯ ಸೆಂಟ್ರಲ್‌ ಠಾಣೆ ವ್ಯಾಪ್ತಿಯ ಸೂರ್ಯ ಅಲಿಯಾಸ್‌ ಚಾಕು ಸೂರಿ (23), ಪ್ರಮೋದ ಅಲಿಯಾಸ್‌ ಪಲ್ಲಿ (20), ಕೆ.ಆರ್‌.ಪೇಟೆ ಪಟ್ಟಣ ಠಾಣೆ ವ್ಯಾಪ್ತಿಯ ಕೆ.ಕೆ.ಪಣೀಶ (30), ಸೈಯದ್ ಅಲಿಯಾಸ್‌ ಸೈಯದ್‌ ಖಲೀಲ್‌ (35), ಕಿರಣ ಅಲಿಯಾಸ್‌ ಅಗಸ್ತ್ಯ (22), ವೆಂಕಟೇಶ್‌ (24), ವಿಜಯ ಅಲಿಯಾಸ್‌ ಬಾಡು (26), ಗಣೇಶ ಅಲಿಯಾಸ್‌ ಬ್ಯಾಡಗಿ (22), ಕಾರ್ತಿಕ್‌ ಅಲಿಯಾಸ್‌ ಜಂಗಲ್‌ (21), ಮಂಡ್ಯ ಪೂರ್ವ ಠಾಣೆ ವ್ಯಾಪ್ತಿಯ ಕುಮಾರ ಅಲಿಯಾಸ್‌ ಮಜ್ಜಿಗೆ (28), ಮಂಡ್ಯ ಪಶ್ಚಿಮ ಠಾಣೆ ವ್ಯಾಪ್ತಿಯ ಕುಮಾರ ಅಲಿಯಾಸ್‌ ಡಾನ್‌ (27), ಮದ್ದೂರು ಠಾಣೆ ವ್ಯಾಪ್ತಿಯ ವೀರೇಶ್‌ (22), ವರುಣ್‌ (22), ಸೂರಜ್‌ಗೌಡ ಅಲಿಯಾಸ್‌ ಪುಟಾಣಿ (22), ಎಂ.ಬಿ.ಪ್ರಶಾಂತ್‌ ಅಲಿಯಾಸ್‌ ಕುಳ್ಳಿ (24), ಮಳವಳ್ಳಿ ಠಾಣೆ ವ್ಯಾಪ್ತಿಯ ಮರಿಲಿಂಗೇಗೌಡ (62) ಗಡಿಪಾರಾದ ರೌಡಿ ಶೀಟರ್‌ಗಳು.

‘ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !