ಅದಾನಿ, ಅಂಬಾನಿ ಕಂಪನಿಗಳಿಗೆ ಚೌಕಿದಾರ ಮೋದಿ: ಎಸ್.ಜಿ.ನಂಜಯ್ಯನಮಠ ಲೇವಡಿ

ಶನಿವಾರ, ಏಪ್ರಿಲ್ 20, 2019
27 °C
ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ

ಅದಾನಿ, ಅಂಬಾನಿ ಕಂಪನಿಗಳಿಗೆ ಚೌಕಿದಾರ ಮೋದಿ: ಎಸ್.ಜಿ.ನಂಜಯ್ಯನಮಠ ಲೇವಡಿ

Published:
Updated:
Prajavani

ಬಾಗಲಕೋಟೆ: ‘ಪ್ರಧಾನಿ ನರೇಂದ್ರ ಮೋದಿ, ದೇಶದ ಚೌಕಿದಾರ (ಕಾವಲುಗಾರ) ಆಗಿರಲಿಲ್ಲ ಬದಲಿಗೆ ಅದಾನಿ, ಅಂಬಾನಿ ಕಂಪೆನಿಗಳಿಗೆ ಚೌಕಿದಾರ ಆಗಿದ್ದರು’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಲೇವಡಿ ಮಾಡಿದರು.

‘ಅನುಭವ ಇಲ್ಲದಿದ್ದರೂ ರಫೆಲ್ ವಿಮಾನ ಉತ್ಪಾದನೆಯ ಟೆಂಡರನ್ನು ಸರ್ಕಾರಿ ಸ್ವಾಮ್ಯದ ಎಚ್‌ಎಎಲ್ ಬದಲಿಗೆ ಅನಿಲ್ ಅಂಬಾನಿ ಕಂಪೆನಿಗೆ ಕೊಡಿಸಿದ್ದು ಇದಕ್ಕೆ ಸಾಕ್ಷಿಯಾಗಿದೆ. ಮೋದಿಯ ಮೋಡಿ ಮಾತಿಗೆ ದೇಶದ ಜನತೆ ಈ ಬಾರಿ ಮೋಸ ಹೋಗುವುದಿಲ್ಲ’  ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಉದ್ಯಮಿಗಳಾದ ವಿಜಯಮಲ್ಯ, ನೀರವ್‌ಮೋದಿ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ವಂಚಿಸಿ ಪರಾರಿಯಾದಾಗ, ರಫೆಲ್ ಒಪ್ಪಂದದ ಕಡತಗಳು ಕಾಣೆಯಾದಾಗ ಈ ಚೌಕಿದಾರ ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದ ಅವರು, ‘ಕಳೆದ ಐದು ವರ್ಷದಿಂದ ಮೋದಿ ಅವರ ವ್ಯಾಪಾರಿ ಮನೋಭಾವದ ಆಡಳಿತ ನೋಡಿ ದೇಶದ ಜನ ಭ್ರಮನಿರಸನರಾಗಿದ್ದಾರೆ’ ಎಂದರು.

‘ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುವುದಾಗಿ, ರೈತರ ಸಾಲ ಮನ್ನಾ ಮಾಡುವುದಾಗಿ ಕಳೆದ ಚುನಾವಣೆ ವೇಳೆ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಮಾತು ಉಳಿಸಿಕೊಳ್ಳಲಿಲ್ಲ’ ಎಂದು ಹೇಳಿದರು. 

‘ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಗೆಲುವು ನಿಶ್ಚಿತ. ಜೆಡಿಎಸ್ ಸೇರಿದಂತೆ ಜಿಲ್ಲೆಯ ಎಲ್ಲ ನಾಯಕರೂ ಈಗ ಒಗ್ಗಟ್ಟಾಗಿದ್ದೇವೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿ ವೀಣಾ ಮಾಡಿದ ಕಾರ್ಯಗಳು, ಜನರೊಂದಿಗಿನ ಒಡನಾಟ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಎಲ್ಲರೂ ಸೇರಿ ಅವರ ಗೆಲುವಿಗೆ ಶ್ರಮಿಸಲಿದ್ದೇವೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಆನಂದ ಜಿಗಜಿನ್ನಿ, ರಮೇಶ ಹುಕ್ಕೇರಿ, ಬಸವರಾಜ ಕೊತಬಾಗಿ, ಮಂಜುನಾಥ ಕುರ್ತಗೇರಿ, ಫತ್ತೇವಾಲಿ ಇದ್ದರು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 11

  Angry

Comments:

0 comments

Write the first review for this !