ಅಂಬರೀಷಣ್ಣನಿಗೆ ಒಬ್ಬರೇ ಹೆಂಡ್ತಿ: ಯಶ್‌

ಮಂಗಳವಾರ, ಏಪ್ರಿಲ್ 23, 2019
25 °C

ಅಂಬರೀಷಣ್ಣನಿಗೆ ಒಬ್ಬರೇ ಹೆಂಡ್ತಿ: ಯಶ್‌

Published:
Updated:

ಮಂಡ್ಯ: ‘ಅಂಬರೀಷಣ್ಣನಿಗೆ ಇರುವುದು ಒಬ್ಬರೇ ಹೆಂಡತಿ. ಎಷ್ಟು ಜನ ಸುಮಲತಾ ನಿಂತರೂ ಜನರಿಗೆ ಗೊಂದಲ ಉಂಟಾಗುವುದಿಲ್ಲ’ ಎಂದು ನಟ ಯಶ್‌ ಮಂಗಳವಾರ ಹೇಳಿದರು.

ಮದ್ದೂರು ತಾಲ್ಲೂಕು ಅಂಬರಹಳ್ಳಿ ಗ್ರಾಮದಲ್ಲಿ ಸುಮಲತಾ ಪರ ಪ್ರಚಾರದಲ್ಲಿ ತೊಡಗಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿ, ‘ಸುಮಲತಾ ಅವರ ಬಗ್ಗೆ ಜನರಿಗೆ ಗೊತ್ತಿದೆ. ಯಾವುದೇ ಗೊಂದಲಕ್ಕೆ ಒಳಗಾಗದೇ ಮತ ನೀಡುತ್ತಾರೆ. ಕೆಲವರು ಜನರ ಮುಗ್ಧತೆಯನ್ನು ದುರುಪಯೋಗ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಬೇರೆಯದೇ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಇಬ್ಬರೂ ಅಭ್ಯರ್ಥಿಗಳನ್ನು ಮುಖಾಮುಖಿ ಕೂರಿಸಿ ಚರ್ಚೆ ಮಾಡಿಸಬೇಕು’ ಎಂದರು.

ಬರಹ ಇಷ್ಟವಾಯಿತೆ?

  • 44

    Happy
  • 5

    Amused
  • 0

    Sad
  • 0

    Frustrated
  • 5

    Angry

Comments:

0 comments

Write the first review for this !