₹10 ಲಕ್ಷ ಮೌಲ್ಯದ ಬೀಯರ್ ವಶ

ಶುಕ್ರವಾರ, ಏಪ್ರಿಲ್ 26, 2019
33 °C
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ

₹10 ಲಕ್ಷ ಮೌಲ್ಯದ ಬೀಯರ್ ವಶ

Published:
Updated:
Prajavani

ಚಿಕ್ಕಬಳ್ಳಾಪುರ: ಚಿಂತಾಮಣಿಯ ಊಲವಾಡಿ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮದ (ಕೆಎಸ್‌ಬಿಸಿಎಲ್) ಡಿಪೋ ಆವರಣದಲ್ಲಿ ಮಂಗಳವಾರ ಸಂಜೆ ಅಬಕಾರಿ ಇಲಾಖೆ ಅಧಿಕಾರಿಗಳು ಲಾರಿಯೊಂದರಲ್ಲಿದ್ದ ₹10 ಲಕ್ಷ ಮೌಲ್ಯದ ಬೀಯರ್‌ ವಶಪಡಿಸಿಕೊಂಡು, ಲಾರಿಯನ್ನು ಜಪ್ತಿ ಮಾಡಿದ್ದಾರೆ.

ಮೈಸೂರು ಜಿಲ್ಲೆಯ ಮಲಿಯೂರಿನ ಎಸ್‌ಪಿಆರ್‌ ಡಿಸ್ಟಿಲರೀಸ್‌ ಕಾರ್ಖಾನೆಯಿಂದ ಡಿಪೋಗೆ 125 ಬಾಕ್ಸ್‌ ಬಿಯರ್‌ ಸರಬರಾಜು ಆಗಬೇಕಿತ್ತು. ಆದರೆ ಲಾರಿಯಲ್ಲಿ 150 ಬಾಕ್ಸ್‌ ಕಳುಹಿಸಲಾಗಿತ್ತು. ಇದನ್ನು ಪತ್ತೆ ಮಾಡಿದ ಅಬಕಾರಿ ಅಧಿಕಾರಿಗಳು ಲಾರಿಯಲ್ಲಿದ್ದ 725 ಬಾಕ್ಸ್‌ ಬೀಯರ್‌ನ್ನೂ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !