ನಂಬಿಕೆಗೆ ಅರ್ಹವಲ್ಲದ ಬಿಜೆಪಿ ಕಿತ್ತೊಗೆಯಿರಿ

ಭಾನುವಾರ, ಏಪ್ರಿಲ್ 21, 2019
32 °C
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜಕೀಯ ಸಮಾವೇಶದಲ್ಲಿ ಸಂಘದ ರಾಜ್ಯ ಘಟಕ ಅಧ್ಯಕ್ಷ ನಿತ್ಯಾನಂದ ಸ್ವಾಮಿ ಸಲಹೆ

ನಂಬಿಕೆಗೆ ಅರ್ಹವಲ್ಲದ ಬಿಜೆಪಿ ಕಿತ್ತೊಗೆಯಿರಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ನರೇಂದ್ರ ಮೋದಿ ಅವರೊಬ್ಬ ವಚನ ಭ್ರಷ್ಟ ಪ್ರಧಾನಮಂತ್ರಿ, ಹೀಗಾಗಿ ಈ ಬಾರಿ ನಂಬಿಕೆಗೆ ಅರ್ಹವಲ್ಲದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕ ಅಧ್ಯಕ್ಷ ನಿತ್ಯಾನಂದ ಸ್ವಾಮಿ ತಿಳಿಸಿದರು.

ನಗರದಲ್ಲಿ ಬುಧವಾರ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಆಯೋಜಿಸಿದ್ದ ರಾಜಕೀಯ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಗೋರಕ್ಷಣೆ ಹೆಸರಿನಲ್ಲಿ ದಲಿತ ಮತ್ತು ಮುಸಲ್ಮಾನರ ಮೇಲೆ ದಾಳಿ ನಡೆಸಿ, ಕೋಮು ಗಲಭೆ ಸೃಷ್ಟಿಸಿದೆ. ರಾಮ ಮಂದಿರ ವಿವಾದವನ್ನು ಮತ್ತೆ ತೀವ್ರಗೊಳಿಸಿ ಕೋಮು ದ್ವೇಷ ಹರಡುವ ಕೆಲಸ ಬಿಜೆಪಿ ಮಾಡುತ್ತಿದೆ’ ಎಂದು ಆರೋಪಿಸಿದರು.

‘ದೇಶದಲ್ಲಿ ಬಡತನ, ನಿರುದ್ಯೋಗ ಸಮಸ್ಯೆ ತಾಂಡವಾಡುವಾಡುತ್ತಿದೆ. ಬಿಜೆಪಿ ಸರ್ಕಾರ ಶ್ರೀಮಂತರನ್ನು ಶ್ರೀಮಂತರನ್ನಾಗಿಸಿ, ಬಡವರನ್ನು ಇನ್ನೂ ಬಡವರನ್ನಾಗಿ ಮಾಡಿದೆ. ಶೇ 1 ರಷ್ಟು ಇರುವ ಆಗರ್ಭ ಶ್ರೀಮಂತರು ಆಸ್ತಿ ಶೇ 70 ರಷ್ಟು ಹೆಚ್ಚಾಗಿದೆ. ಆದರೆ ಕೃಷಿ ಉತ್ಪನ್ನಗಳ ಬೆಲೆ ಕುಸಿದು ರೈತರು ಸಾಲಗಾರರಾಗಿ ಕೂಲಿ ಕಾರ್ಮಿಕರಾಗಿ ವಲಸೆ ಹೋಗುತ್ತಿದ್ದಾರೆ’ ಎಂದು ಹೇಳಿದರು.

‘ಕಪ್ಪುಹಣ ವಾಪಸ್‌ ತರುವ ವಿಚಾರದಲ್ಲಿ ಬಿಜೆಪಿ ಮಾತು ತಪ್ಪಿದೆ. ಗರಿಷ್ಠ ಮುಖಬೆಲೆಯ ನೋಟುಗಳ ಅಮಾನ್ಯೀಕರಣದಿಂದ ಜನಸಾಮಾನ್ಯರು ಸಾಕಷ್ಟು ರೀತಿಯಲ್ಲಿ ತೊಂದರೆ ಅನುಭವಿಸಿದ್ದಾರೆ. ಜಿಎಸ್‌ಟಿ ಜಾರಿಯಿಂದ ಜನರಿಗೆ ತೀವ್ರ ಸಮಸ್ಯೆಯಾಗಿದೆ. ಬಂಡವಾಳಶಾಹಿಗಳ ಕೋಟಿಗಟ್ಟಲೇ ಸಾಲ ಮನ್ನಾ ಮಾಡಿದ ಮೋದಿ ರೈತರ ಸಾಲ ಮನ್ನಾ ಮಾಡಲು ಒಪ್ಪಲಿಲ್ಲ’ ಎಂದರು.

‘ವರ್ಷದಿಂದ ವರ್ಷಕ್ಕೆ ಕೇಂದ್ರ ನರೇಗಾ ಯೋಜನೆಗೆ ನೀಡುವ ಅನುದಾನ ಕಡಿತಗೊಳಿಸುತ್ತಿದೆ. ಆದರೆ ದಿನ ನಿತ್ಯದ ಅಗತ್ಯ ವಸ್ತುಗಳು, ಆರೋಗ್ಯದ ವೆಚ್ಚಗಳು ದುಬಾರಿಯಾಗುತ್ತಿವೆ. ಮೋದಿಯನ್ನು ದೇಶದ ಚೌಕಿದಾರ ಎಂದು ಕರೆಯುತ್ತಾರೆ. ಆದರೆ ಅವರು ಶ್ರೀಮಂತರ ಮನೆಗಳನ್ನು ಕಾಯುವ ಚೌಕಿದಾರ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ದೇಶದ ಕೃಷಿ ಕೂಲಿಕಾರರು ಹಲವು ಬಾರಿ ದೆಹಲಿಯಲ್ಲಿ ಮತ್ತು ರಾಜ್ಯದ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿ, ಕೃಷಿ ಕೂಲಿ ಕಾರ್ಮಿಕರಿಗಾಗಿ ಒಂದು ಸಮಗ್ರ ಕಾನೂನನ್ನು ಅಂಗೀಕರಿಸುವಂತೆ ಒತ್ತಾಯಿಸಿದರೂ ಮೋದಿ ಸರ್ಕಾರ ಕೂಲಿ ಕಾರ್ಮಿಕರ ಬಗ್ಗೆ ಸ್ವಲ್ಪವೂ ಕಾಳಜಿ ತೋರಲಿಲ್ಲ. ಸಕಾಲಕ್ಕೆ ನರೇಗಾ ಕೂಲಿ ಬಿಡುಗಡೆ ಮಾಡದೆ ತಿಂಗಳುಗಟ್ಟಲೇ ಪರದಾಡುವಂತೆ ಮಾಡಿದರು’ ಎಂದು ಹೇಳಿದರು.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಹನುಮೇಗೌಡ, ಸದಸ್ಯರಾದ ಎಂ.ಪಿ.ಮುನಿವೆಂಕಟಪ್ಪ, ಆರ್.ರಾಮಪ್ಪ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ಸದಸ್ಯೆ ಬಿ.ಸಾವಿತ್ರಮ್ಮ, ಮುಖಂಡ ಎಂ.ಎನ್.ರಘುರಾಮರೆಡ್ಡಿ ಉಪಸ್ಥಿತರಿದ್ದರು.

**

ಕೇಂದ್ರದಲ್ಲಿ ಕೋಮುವಾದಿ ಬಿಜೆಪಿ ಕೆಳಗಿಳಿಸಿ ಜಾತ್ಯತೀತ ಸರ್ಕಾರ ಅಧಿಕಾರಕ್ಕೆ ತರಬೇಕಾಗಿದೆ. ಅದಕ್ಕಾಗಿ ಇಲ್ಲಿ ಸಿಪಿಎಂ ಅಭ್ಯರ್ಥಿ ಎಸ್.ವರಲಕ್ಷ್ಮಿ ಅವರನ್ನು ಗೆಲ್ಲಿಸಬೇಕು.
–ನಿತ್ಯಾನಂದ ಸ್ವಾಮಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !