ಜಿಲ್ಲಾಧಿಕಾರಿ ವರ್ಗಾವಣೆಯಾದರೆ ಜೆಡಿಎಸ್‌ನವರಿಗೆ ಆಗುವ ನಷ್ಟವೇನು?: ಸುಮಲತಾ

ಭಾನುವಾರ, ಏಪ್ರಿಲ್ 21, 2019
26 °C

ಜಿಲ್ಲಾಧಿಕಾರಿ ವರ್ಗಾವಣೆಯಾದರೆ ಜೆಡಿಎಸ್‌ನವರಿಗೆ ಆಗುವ ನಷ್ಟವೇನು?: ಸುಮಲತಾ

Published:
Updated:

ಮಂಡ್ಯ: ‘ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಚುನಾವಣಾ ಆಯೋಗ ಜಿಲ್ಲಾ ಚುನಾವಣಾಧಿಕಾರಿಯನ್ನು ವರ್ಗಾವಣೆ ಮಾಡಿದೆ. ನಮಗೆ ನ್ಯಾಯ ಸಿಕ್ಕಿದೆ’ ಎಂದು ಪಕ್ಷೇತರ ಅರ್ಭ್ಯಥಿ ಸುಮಲತಾ ಬುಧವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಜೆಡಿಎಸ್‌ ಮುಖಂಡರು ಚುನಾವಣಾ ಆಯೋಗದ ವಿರುದ್ಧವೇ ಮಾತನಾಡುತ್ತಿದ್ದಾರೆ. ಜಿಲ್ಲಾಧಿಕಾರಿ ವರ್ಗಾವಣೆಯಾದರೆ ಇವರಿಗೆ ಆಗುವ ನಷ್ಟವೇನು. ಇವರ ಸರ್ಕಾರದಿಂದ ಎಷ್ಟು ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿಲ್ಲ’ ಎಂದು ಪ್ರಶ್ನಿಸಿದರು.

ಜಯಶ್ರೀ ಭಾಗಿ: ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಾಲ ಮನ್ನಾ ಹೆಸರಿನಲ್ಲಿ ರೈತರಿಗೆ ಮೋಸ ಮಾಡಿದ್ದಾರೆ. ಇಲ್ಲಿಯವರೆಗೆ ಯಾವ ರೈತರ ಸಾಲವೂ ಮನ್ನಾ ಆಗಿಲ್ಲಿ, ಬ್ಯಾಂಕ್‌ ನೋಟಿಸ್‌ಗಳಿಂದ ರೈತರು ಕಂಗಾಲಾಗಿದ್ದಾರೆ’ ಎಂದು ಬೆಳಗಾವಿಯ ರೈತ ಮಹಿಳೆ ಜಯಶ್ರೀ ಹೇಳಿದರು.

ಪಾಂಡವಪುರ ತಾಲ್ಲೂಕು ಕುಂಬಾರಕೊಪ್ಪಲು ಗ್ರಾಮದಲ್ಲಿ ಮಾತನಾಡಿದ ಅವರು ‘ಸುಮಲತಾ ಅವರ ಪರ ಪ್ರಚಾರ ನಡೆಸಲು ಬೆಳಗಾವಿಯಿಂದ ಬಂದಿದ್ದೇನೆ. ರೈತರು ಅಭಿವೃದ್ಧಿಯಾಗಬೇಕಾದರೆ ಸುಮಲತಾ ಅವರು ಆಯ್ಕೆಯಾಗಬೇಕು. ಜೆಡಿಎಸ್‌ ಮುಖಂಡರ ಗಿಮಿಕ್‌ಗಳಿಗೆ ಮರುಳಾಗದೇ ಮಹಿಳೆಯೊಬ್ಬರಿಗೆ ಬೆಂಬಲ ನೀಡಬೇಕು’ ಎಂದರು.

ಬರಹ ಇಷ್ಟವಾಯಿತೆ?

  • 11

    Happy
  • 2

    Amused
  • 0

    Sad
  • 0

    Frustrated
  • 4

    Angry

Comments:

0 comments

Write the first review for this !