ಸುಮಲತಾ ಪರ ಜಯಶ್ರೀ ಪ್ರಚಾರ

ಭಾನುವಾರ, ಏಪ್ರಿಲ್ 21, 2019
26 °C

ಸುಮಲತಾ ಪರ ಜಯಶ್ರೀ ಪ್ರಚಾರ

Published:
Updated:
Prajavani

ಮಂಡ್ಯ: ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಾಲ ಮನ್ನಾ ಹೆಸರಿನಲ್ಲಿ ರೈತರಿಗೆ ಮೋಸ ಮಾಡಿದ್ದಾರೆ. ಇಲ್ಲಿಯವರೆಗೆ ಯಾವ ರೈತರ ಸಾಲವೂ ಮನ್ನಾ ಆಗಿಲ್ಲ. ಬ್ಯಾಂಕ್‌ ನೋಟಿಸ್‌ಗಳಿಂದ ರೈತರು ಕಂಗಾಲಾಗಿದ್ದಾರೆ’ ಎಂದು ಬೆಳಗಾವಿಯ ರೈತ ಮಹಿಳೆ ಜಯಶ್ರೀ ಹೇಳಿದರು.

ಪಾಂಡವಪುರ ತಾಲ್ಲೂಕು ಕುಂಬಾರಕೊಪ್ಪಲು ಗ್ರಾಮದಲ್ಲಿ ಸುಮಲತಾ ಪರ ಪ್ರಚಾರ ಕೈಗೊಂಡು ಅವರು ಮಾತನಾಡಿದರು. ‘ಸುಮಲತಾ ಪರ ಪ್ರಚಾರ ನಡೆಸಲು ಬೆಳಗಾವಿಯಿಂದ ಬಂದಿದ್ದೇನೆ. ರೈತರು ಅಭಿವೃದ್ಧಿಯಾಗಬೇಕಾದರೆ ಸುಮಲತಾ ಅವರು ಆಯ್ಕೆಯಾಗಬೇಕು. ಜೆಡಿಎಸ್‌ ಮುಖಂಡರ ಗಿಮಿಕ್‌ಗಳಿಗೆ ಮರುಳಾಗದೇ ಮಹಿಳೆಯೊಬ್ಬರಿಗೆ ಬೆಂಬಲ ನೀಡಬೇಕು’ ಎಂದರು.

ಬರಹ ಇಷ್ಟವಾಯಿತೆ?

  • 3

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !