ನಾಳೆಯಿಂದ ರಾಮೋತ್ಸವ ಸಂಭ್ರಮ

ಮಂಗಳವಾರ, ಏಪ್ರಿಲ್ 23, 2019
33 °C

ನಾಳೆಯಿಂದ ರಾಮೋತ್ಸವ ಸಂಭ್ರಮ

Published:
Updated:

ಚಿಂತಾಮಣಿ: ನಗರದ ಎನ್.ಆರ್.ಬಡಾವಣೆಯ ಬ್ರಹ್ಮಚೈತನ್ಯ ಶ್ರೀರಾಮ ಮಂದಿರದಲ್ಲಿ ಏಪ್ರಿಲ್ 13ರಿಂದ 22ರ ವರೆಗೆ ರಾಮೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ಏಪ್ರಿಲ್ 13 ರಂದು ಶನಿವಾರ ಬೆಳಿಗ್ಗೆ ಶ್ರೀ ಸೀತಾಲಕ್ಷ್ಮಣ ಮಾರುತಿ, ಬ್ರಹ್ಮಚೈತನ್ಯ ಸಮೇತ ಶ್ರೀರಾಮಚಂದ್ರಸ್ವಾಮಿಗೆ ಪಂಚಾಮೃತಾಭಿಷೇಕ, ಅಷ್ಟಾವಧಾನಸೇವೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ರಾತ್ರಿ 9-30 ಗಂಟೆಯವರೆಗೆ ದಿವ್ಯದರ್ಶನ. ಪ್ರತಿನಿತ್ಯ ವಿವಿಧ ಭಜನಾ ಮಂಡಳಿಯವರಿಂದ ವಿಷ್ಣುಸಹಸ್ರನಾಮ, ದೇವರನಾಮಗಳ ಪಾರಾಯಣ ಇರುತ್ತದೆ.

ಏ. 14ರಿಂದ 17 ರವರೆಗೆ ಸಂಜೆ 6.45 ಗಂಟೆಗೆ ಸುಧೀರ್ಚೈತನ್ಯಸ್ವಾಮಿಗಳಿಂದ ಲಕ್ಷ್ಮಣಗೀತೆ ಕುರಿತು ಉಪನ್ಯಾಸ, 17 ರಂದು ಬೆಳಿಗ್ಗೆ 11 ರಿಂದ 12 ರವರೆಗೆ ಕೃಷ್ಣರಾಜಪುರದ ಹರಿದಾಸ ಸಂಘದ ಸಂಸ್ಥಾಪಕ ನಾಗರಾಜಾಚಾರ್ಯರಿಂದ ಶ್ರೀರಾಮಪರಂಧಾಮ ಉಪನ್ಯಾಸ. 18ರಿಂದ 20ರ ವರೆಗೆ ಸಂಜೆ ಬ್ರಾಹ್ಮಣತೀರ್ಥಾಚಾರ್ ಅವರಿಂದ ಶ್ರೀರಾಮಚಾರಿತ್ರ ಮಂಜರಿ ಉಪನ್ಯಾಸ, 21ರಂದು ಸಂಜೆ ಸೀತಾರಾಮ ಕಲ್ಯಾಣೋತ್ಸವ, 22ರಂದು ಶ್ರೀರಾಮಪಟ್ಟಾಭಿಷೇಕ ಕಾರ್ಯಕ್ರಮ ನಡೆಯುತ್ತದೆ ಎಂದು ಮಂದಿರದ ಅಧ್ಯಕ್ಷ ಜಿ.ಎಚ್.ವೆಂಕಟೇಶಮೂರ್ತಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !