ಗೆಲ್ಲುವ ಕುದುರೆ ಮೇಲೆ ಮುನಿಯಪ್ಪ ಸವಾರಿ

ಮಂಗಳವಾರ, ಏಪ್ರಿಲ್ 23, 2019
31 °C

ಗೆಲ್ಲುವ ಕುದುರೆ ಮೇಲೆ ಮುನಿಯಪ್ಪ ಸವಾರಿ

Published:
Updated:
Prajavani

ಚಿಂತಾಮಣಿ: ಕೆ.ಎಚ್.ಮುನಿಯಪ್ಪ ಸ್ವಂತ ಬಲದಿಂದ ಯಾವ ಚುನಾವಣೆಯಲ್ಲೂ ಜಯಗಳಿಸಿಲ್ಲ. ಪ್ರತಿ ಚುನಾವಣೆಯಲ್ಲೂ ಗೆಲ್ಲುವ ಕುದುರೆಗಳನ್ನು ಸಹಾಯದಿಂದ ಗೆಲುವನ್ನು ಸಾಧಿಸಿದ್ದಾರೆ. ಈ ಬಾರಿ ಈ ತಂತ್ರ ಫಲಿಸುವುದಿಲ್ಲ ಎಂದು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಟೀಕಿಸಿದರು.

ತಾಲ್ಲೂಕಿನ ಕೈವಾರದಲ್ಲಿ ಬಿಜೆಪಿ ಹಾಗೂ ಸುಧಾಕರ್ ಬೆಂಬಲಿಗರ ಸಭೆಯಲ್ಲಿ ಮಾತನಾಡಿದರು.

ಸಂಸದ ಕೆ.ಎಚ್.ಮುನಿಯಪ್ಪ ಕಾಂಗ್ರೆಸ್ ಪಕ್ಷದಲ್ಲಿ ಅದಿಪತ್ಯವನ್ನು ಸ್ಥಾಪಿಸಿಕೊಂಡು ತಾವು ಏರಿದ ಏಣಿಯನ್ನು ದಡ ಸೇರಿದ ಮೇಲೆ ಒದೆಯಲು ತಂತ್ರ ಕುತಂತ್ರಗಳನ್ನು ಮಾಡಿದರು. ಅವರ ವಿರುದ್ಧ ಹೋರಾಟ ಮಾಡಿದ್ದೇವೆಯೇ ಹೊರತು ಎಂ.ಸಿ.ಆಂಜನೇಯ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ಯಾವತ್ತೂ ದ್ರೋಹ ಮಾಡಿಲ್ಲ. 1991ರಲ್ಲಿ ಕೆ.ಎಚ್.ಮುನಿಯಪ್ಪ ರಾಜಕೀಯಕ್ಕೆ ಪ್ರವೇಶ ಮಾಡಿದ ನಂತರ ಹೇಗೆ ನಡೆದುಕೊಂಡರು ಎಂಬುದನ್ನು ಮತದಾರರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪನವರಿಗೆ ಕಾಂಗ್ರೆಸ್ ತಾಯಿ ಪಕ್ಷವಾಗಿ ಕಾಣಿಸುತ್ತದೆ. ವಿಧಾನಸಭೆ ಚುನಾವಣೆಯಲ್ಲಿ ತಾಯಿಯಾಗಿರುವುದಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿಂತಾಮಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಕೇವಲ 2 ಸಾವಿರ ಮತಗಳನ್ನು ಮಾತ್ರ ಪಡೆಯಿತು. ಕಾಂಗ್ರೆಸ್ ಮತಗಳನ್ನು ಯಾರಿಗೆ ಕೊಡಿಸಿದರು ಎಂಬುದು ಕ್ಷೇತ್ರದ ಜನತೆಗೆ ಗೊತ್ತು. ಪ್ರತಿ ಚುನಾವಣೆಯಲ್ಲೂ ಇದೇ ತಂತ್ರವನ್ನು ಬಳಸಿಕೊಂಡು ಪಕ್ಷ ಹಾಳಾದರೂ ನಷ್ಟವಿಲ್ಲ ತಾನು ಮಾತ್ರ ಗೆಲ್ಲಬೇಕು ಎಂಬುದು ಅವರ ತಂತ್ರವಾಗಿದೆ ಎಂದು ಆರೋಪಿಸಿದರು.

ಪಕ್ಷದ ಅಭ್ಯರ್ಥಿ ಮುನಿಸ್ವಾಮಿ ಮಾತನಾಡಿ, ಸಂಸದ ಕೆ.ಎಚ್.ಮುನಿಯಪ್ಪ ಪ್ರತಿ ಚುನಾವಣೆಗೂ ಒಂದೊಂದು ವೇಷ ಹಾಕಿಕೊಂಡು ಜಯಗಳಿಸುತ್ತಿದ್ದಾರೆ. 7 ಬಾರಿ ಸಂಸದರಾದರೂ ಕ್ಷೇತ್ರದ ಯಾವುದೇ ಅಭಿವೃದ್ಧಿಯಲ್ಲಿ ಮಾಡಲಿಲ್ಲ. ಬದಲಾಗಿ ತಾನು ಮತ್ತು ತನ್ನ ಸಂಬಂಧಿಕರ ಅಭಿವೃದ್ಧಿಯನ್ನು ಮಾಡಿಕೊಂಡರು. ಒಂದು ಬಾರಿ ಅವಕಾಶ ನೀಡಿ, ಇಷ್ಟವಾಗದಿದ್ದರೆ ಮತ್ತೆ ಬದಲಾಯಿಸಬಹುದು ಎಂದು ಮನವಿ ಮಾಡಿದರು.

ಮುಖಂಡರಾದ ಸುರೇಂದ್ರಗೌಡ, ನಾ.ಶಂಕರ್, ಅರುಣಬಾಬು, ಬ್ಯಾಲಹಳ್ಳಿ ಆಂಜನೇಯರೆಡ್ಡಿ, ಸುಧಾಕರ್ ಬೆಂಬಲಿಗರಾದ ಚಿನ್ನಪ್ಪ, ಡಾಬ ನಾಗರಾಜ್, ಅಬ್ಬುಗುಂಡು ಶ್ರೀನಿವಾಸರೆಡ್ಡಿ, ಶ್ರೀನಿವಾಸ್, ಶಿವಣ್ಣ, ಮಂಜುನಾಥ್, ಶೈಲಜಾಮಂಜುನಾಥ್, ಗೋವಿಂದ, ಕೋನಪ್ಪಲ್ಲಿ ಶಿವಾರೆಡ್ಡಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !