ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವ ಉದ್ದೇಶ

ಶನಿವಾರ, ಏಪ್ರಿಲ್ 20, 2019
°C

ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವ ಉದ್ದೇಶ

Published:
Updated:

ಶಿಕಾರಿಪುರ: ‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಉದ್ದೇಶವನ್ನು ಉತ್ತಮ ಪ್ರಜಾಕೀಯ ಪಕ್ಷ ಹೊಂದಿದೆ’ ಎಂದು ಲೋಕಸಭಾ ಚುನಾವಣೆ ಉತ್ತಮ ಪ್ರಜಾಕೀಯ ಪಕ್ಷ ಅಭ್ಯರ್ಥಿ ಆರ್‌. ವೆಂಕಟೇಶ್‌ ಮನವಿ ಮಾಡಿದರು.

 ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಣ ಅಂತಸ್ತು ಹೊಂದಿದವರು ಪ್ರಸ್ತುತ ರಾಜಕೀಯ ಅಧಿಕಾರ ನಡೆಸುತ್ತಿದ್ದಾರೆ. ಸಾಮಾನ್ಯ ಪ್ರಜೆಗಳು ಆಡಳಿತ ನಡೆಸುವಂತಾಗಬೇಕು. ಚುನಾಯಿತ ಪ್ರತಿನಿಧಿ ಕಾರ್ಮಿಕನಂತೆ ಕೆಲಸ ಮಾಡಬೇಕು ಎಂದ ಅವರು, ಸಾಮಾನ್ಯ ಜನರು ರಾಜಕೀಯಕ್ಕೆ ಬರಲು ಉತ್ತಮ ಪ್ರಜಾಕೀಯ ಪಕ್ಷ ಅವಕಾಶ ಕಲ್ಪಿಸಿದೆ’ ಎಂದರು.

ರಾಜ್ಯದ 27 ಕ್ಷೇತ್ರಗಳಲ್ಲಿ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಿಂದ ನಾನು ಸ್ಪರ್ಧಿಸಿದ್ದು,ಜನತೆ ನನಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದ ಅವರು, ‘ಶಿವಮೊಗ್ಗದಲ್ಲಿ ಏ.15ರಂದು ನಟ ಉಪೇಂದ್ರ ನನ್ನ ಪರ ಪ್ರಚಾರ ನಡೆಸಲಿದ್ದಾರೆ. ಉತ್ತಮ ಆಡಳಿತಕ್ಕಾಗಿ ನಮ್ಮನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಡ್ಯಾನಿ, ರಾಕೇಶ್‌, ಪ್ರದೀಪ್‌ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !