ರೈತರ ನಿರ್ಲಕ್ಷ್ಯ ಮಾಡಿದ ನರೇಂದ್ರ ಮೋದಿ

ಗುರುವಾರ , ಏಪ್ರಿಲ್ 25, 2019
22 °C

ರೈತರ ನಿರ್ಲಕ್ಷ್ಯ ಮಾಡಿದ ನರೇಂದ್ರ ಮೋದಿ

Published:
Updated:
Prajavani

ನಾಗಮಂಗಲ: ‘ರೈತನೇ ನಮ್ಮ ನಾಡಿನ ಶಕ್ತಿ. ಐದು ವರ್ಷದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರೈತರ ಪರವಾಗಿ ಯಾವುದೇ ಕೆಲಸ ಮಾಡಿಲ್ಲ. ಕೇವಲ ಹಿಂದೂ ಧರ್ಮದ ಹೆಸರಿನಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಾಯೇ ಹೊರತು ರೈತ ಬಗ್ಗೆ ಯಾವತ್ತೂ ಚಿಂತಿಸಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಸಿ.ಎಂ.ಇಬ್ರಾಹಿಂ ಹೇಳಿದರು.

ಪಟ್ಟಣದಲ್ಲಿ ನಡೆದ ಮೈತ್ರಿ ಅಭ್ಯರ್ಥಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘ದೇಶ ಸರ್ವನಾಶದತ್ತ ಹೋಗುತ್ತಿದೆ. ಈ ಚುನಾವಣೆ 6.5 ಕೋಟಿ ಕನ್ನಡಿಗರ ಸ್ವಾಭಿಮಾನವನ್ನು ಮೋದಿಗೆ ತೋರಿಸುವ ಚುನಾವಣೆಯಾಗಿದೆ. ಚಹಾ ಮಾರುವವನು ಬಂದು ಪ್ರಧಾನಿಯಾಗಿದ್ದಾನೆ. ಮೋದಿ ಐದು ವರ್ಷದಲ್ಲಿ ಕರ್ನಾಟಕಕ್ಕೆ ಅವರ ಕೊಡುಗೆ ಏನು? ಅವರು ಹಾಕುವುದು ₹ 12 ಲಕ್ಷದ ಸೂಟು, ಆದರೆ ರೈತರ ಪರವಾದ ಪ್ರಧಾನಿಯಾಗಿದ್ದ ದೇವೇಗೌಡರು ಹಾಕುವುದು ₹ 200 ರೂಪಾಯಿ ಪಂಚೆ. ದೇವೇಗೌಡರು ಅಂಬಾನಿ, ಅದಾನಿ ಅವರನ್ನು ಬೆಳೆಸಿಲ್ಲ, ರೈತರನ್ನು ಬೆಳೆಸಿದ್ದಾರೆ’ ಎಂದರು.

‘ದೇವೇಗೌಡರನ್ನು ಸೋಲಿಸಿ ಅವಮಾನಿಸಲು ಮಂಡ್ಯದಲ್ಲಿ ಬಿಜೆಪಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದೆ. ದೇವೇಗೌಡರು ತಿನ್ನುವ ಆಹಾರ ತಿಂದರೆ ಮೋದಿ ಮೂರು ದಿನಕ್ಕೆ ಸಾಯುತ್ತಾನೆ. ರೂಪಾಯಿ ಅಪಮೌಲ್ಯ ಮಾಡಿದ, ಆದರೆ ಅದರಿಂದ ಆದ ಪ್ರಯೋಜನವೇನು ಎಂದು ಜನರಿಗೆ ಮೋದಿ ಹೇಳಿದನಾ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

 ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ ‘ಪ್ರಧಾನಿ ನರೇಂದ್ರ ಮೋದಿ ಅವರು 56 ಇಂಚಿನ ಎದೆ ನನಗೆ ಇದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರಿಗೆ ತಾಯಿ ಹೃದಯವಿಲ್ಲ. ಬಿಜೆಪಿಯವರು ಪ್ರಜಾಪ್ರಭುತ್ವವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.  ಡೋಂಗಿ ಬಿಜೆಪಿ ಯವರಿಗೆ ಮತ ನೀಡಬೇಡಿ’ ಎಂದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮಾತನಾಡಿ ‘ ಜನರು ಆಲೋಚಿಸಬೇಕು,  ಹೋರಾಟ ಮಾಡುವವರಿಗೆ ಬೆಂಬಲ ನೀಡಬೇಕು. ನಿಮ್ಮ ಕಷ್ಟಸುಖದಲ್ಲಿ ಭಾಗಿಯಾಗುವವರನ್ನು ಗೆಲ್ಲಿಸಬೇಕು. ಮೋದಿ ಹೇಳಿದಂತೆ ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಅವರು ನಮ್ಮ ಜನರನ್ನು ಉಳಿಸ್ತಾರಾ ಯೋಚನೆ ಮಾಡಿ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !