‘ಅದೃಷ್ಟದ ಮಹಿಳೆಗೆ ಸನ್ಮಾನ ಮಾಡುತ್ತೇನೆ’

ಶುಕ್ರವಾರ, ಏಪ್ರಿಲ್ 19, 2019
31 °C
‘ದಲಿತರ ಚಿತ್ತ ಅಭಿವೃದ್ಧಿಯತ್ತ’ ಕಾರ್ಯಕ್ರಮದಲ್ಲಿ ರವೀಂದ್ರ ಶ್ರೀಕಂಠಯ್ಯ

‘ಅದೃಷ್ಟದ ಮಹಿಳೆಗೆ ಸನ್ಮಾನ ಮಾಡುತ್ತೇನೆ’

Published:
Updated:

ಶ್ರೀರಂಗಪಟ್ಟಣ: ‘ಸುಮಲತಾ ಅವರು ಇಷ್ಟು ವರ್ಷಗಳಲ್ಲಿ ಮಂಡ್ಯ ಜಿಲ್ಲೆಯ ಒಬ್ಬ ಮಹಿಳೆಗೆ ಅನ್ನ ಹಾಕಿದ ಉದಾಹರಣೆ ಇಲ್ಲ. ಅವರ ಮನೆಗೆ ಹೋದವರ ಕಷ್ಟ ಕೇಳಿಲ್ಲ. ಯಾರಿಗಾದರೂ ಅವರು ಒಂದು ಲೋಟ ನೀರು ಕೊಟ್ಟಿರುವುದು ಸಾಬೀತಾದರೆ ಆ ಅದೃಷ್ಟದ ಮಹಿಳೆಯನ್ನು ಕರೆದು ಸನ್ಮಾನ ಮಾಡುತ್ತೇನೆ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನಜಾಗೃತಿ ವೇದಿಕೆ ಶುಕ್ರವಾರ ಏರ್ಪಡಿಸಿದ್ದ ‘ದಲಿತರ ಚಿತ್ತ ಅಭಿವೃದ್ಧಿಯತ್ತ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಿನಿಮಾ ನಟರು ಟಾಟಾ ಮಾಡಿ, ಡೈಲಾಗ್ ಹೇಳಿ ಹೋದರೆ ಬಡವರ ಹೊಟ್ಟೆ ತುಂಬುವುದಿಲ್ಲ. ಬಣ್ಣದ ಮಾತಿಗೆ ಮರುಳಾಗಿ ವೋಟು ಹಾಕಿದರೆ ಭವಿಷ್ಯದಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ. ಸಿನಿಮಾ ನಟ ಎಲ್ಲೋ ಒಂದು ಕಡೆ ಹಾಲು ಕರೆದರೆ ಅದು ದೊಡ್ಡ ಸುದ್ದಿಯಾಗುತ್ತದೆ. ಎಲ್ಲರ ಮನೆಗೂ ಬಂದು ಹಾಲು ಕರೆಯುವುದಿಲ್ಲ. ನಮ್ಮ ಮನೆಯ ರಾಸುಗಳ ಹಾಲನ್ನು ನಾವೇ ಕರೆಯಬೇಕು. ಮನರಂಜನೆಗೆ ಜನ ಕಾಸು ಕೊಟ್ಟು ಸಿನಿಮಾ ನೋಡುತ್ತಾರೆಯೇ ಹೊರತು ಅವರಿಂದ ಜೀವನ ನಡೆಯುವುದಿಲ್ಲ. ನಮ್ಮ ಜೀವನ ಮಟ್ಟ ಸುಧಾರಿಸಬೇಕಾದರೆ ಸರ್ಕಾರದಿಂದ ಮಾತ್ರ ಸಾಧ್ಯ’ ಎಂದರು.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !