ಅಭಿಮಾನಕ್ಕಿಂತ ಸ್ವಾಭಿಮಾನ ದೊಡ್ಡದು: ನಟ ದರ್ಶನ್

ಸೋಮವಾರ, ಏಪ್ರಿಲ್ 22, 2019
32 °C
ಸುಮಲತಾ ಅಂಬರೀಶ್‌ ಅವರ ಪರ ಪ್ರಚಾರ

ಅಭಿಮಾನಕ್ಕಿಂತ ಸ್ವಾಭಿಮಾನ ದೊಡ್ಡದು: ನಟ ದರ್ಶನ್

Published:
Updated:
Prajavani

ಮಳವಳ್ಳಿ: ‘ನಮ್ಮ ಮೇಲಿನ ಅಭಿಮಾನ ಕ್ಕಿಂತ ಸ್ವಾಭಿಮಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸುಮಾಲತಾ ಅಂಬರೀಶ್‌ ಅವರಿಗೆ ಮತ ನೀಡುವ ಮೂಲಕ ಗೆಲ್ಲಿಸಬೇಕು’ ಎಂದು ನಟ ದರ್ಶನ್ ಮನವಿ ಮಾಡಿದರು.

ಪಟ್ಟಣದ ಅನಂತರಾಂ ವೃತ್ತದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ರೋಡ್ ಶೋ ಮೂಲಕ ಅಬ್ಬರದ ಪ್ರಚಾರದೊಂದಿಗೆ ಮತಯಾಚನೆ ಮಾಡಿ ಅವರು ಮಾತನಾಡಿದರು.

ಎತ್ತು, ಕುರಿ, ನಾಯಿಗಳಿಗೇ ಹೆಚ್ಚು ಬೆಲೆ ಇದೆ. ಆದರೆ ಇಲ್ಲಿ ಕೇವಲ ₹500ಕ್ಕೆ ಮನುಷ್ಯರನ್ನು ಖರೀದಿಸುತ್ತಿದ್ದಾರೆ. ನಿಮ್ಮನ್ನು ಮಾರಿಕೊಳ್ಳಬೇಡಿ, ಸ್ವಾಭಿಮಾನದ ಸಂಕೇತವಾದ ಮಂಡ್ಯ ಜಿಲ್ಲೆಯ ಜನರು ಸುಮಾಲತಾ ಅಂಬರೀಶ್‌ಗೆ ಮತ ನೀಡುವುದರ ಮೂಲಕ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು ಎಂದು ಕೋರಿದರು.

ಅಂಬರೀಶ್ ಅವರು ಅಧಿಕಾರದಲ್ಲಿದ್ದಾಗ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಎಂದಿಗೂ  ಹೇಳಿಕೊಂಡಿಲ್ಲ. ಅವರು ಚಿತ್ರರಂಗದಲ್ಲಿ ತಲೆಎತ್ತಿ ರಾಷ್ಟ್ರವೇ ಮೆಚ್ಚುವಂತಹ ಸಾಧನೆ ಮಾಡಿದ್ದಾರೆ. ಈಗ ಅವರ ಪತ್ನಿ ಸುಮಾಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಚುನಾವಣೆಯಲ್ಲಿ ಗೆಲ್ಲಿಸಿದರೆ  ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ಹೇಳಿದರು.

ಚಲನಚಿತ್ರ ಸ್ಟಾರ್‌ಗಳನ್ನು ನೋಡಲು ಜನ ಬರುತ್ತಾರೆ, ಆದರೆ ಮತ ಹಾಕಲ್ಲ ಎಂದು ಹೇಳುತ್ತಿದ್ದಾರೆ. ಏನ್ರಪ್ಪ ಅಭಿಮಾನಿಗಳು ಸುಮಾಲತಾ ಅಮ್ಮನಿಗೆ ಮತ ಹಾಕಲ್ವ ಎಂದು ಪ್ರಶ್ನಿಸಿದ ಅವರು, ಮತ ಹಾಕುತ್ತೀರಿ ಎಂದು ನಂಬಿದ್ದೇನೆ ಎಂದು ಹೇಳಿದರು.

ಪಟ್ಟಣದ ಶಾಂತಿ ಕಾಲೇಜಿನಿಂದ ಮಳವಳ್ಳಿ ಪಟ್ಟಣದವರೆಗೆ ಸಾವಿರಾರು ಅಭಿಮಾನಗಳ ಜೊತೆಯಲ್ಲಿ ಮೆರವಣಿಗೆ ನಡೆಸಲಾಯಿತು.

ದಾರಿಯುದ್ದಕ್ಕೂ ಡಿ ಬಾಸ್ ಡಿ–ಬಾಸ್ ಎಂಬ ಕೂಗು ಕೇಳಿ ಬರುತ್ತಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಬಾವುಟಗಳು ರಾರಾಜಿಸುತ್ತಿದ್ದವು.

ಕ್ರೇನ್ ಮೂಲಕ ಸೇಬು ಹಾಗೂ ಹೂವಿನ ಹಾರವನ್ನು ಹಾಕಿ ದರ್ಶನ್ ಅವರನ್ನು ಅಭಿನಂದಿಸಲಾಯಿತು.

ಕಾಂಗ್ರೆಸ್ ಮುಖಂಡರಾದ ದೇವರಾಜು, ಪುಟ್ಟರಾಮ, ಮಲ್ಲಯ್ಯ, ವಿಶ್ವಾಸ್, ಸಿ ಮಾದು, ಬಿಜೆಪಿ ಮುಖಂಡ ಮುನಿರಾಜು ಇತರರು ಇದ್ದರು.

ನಂತರ  ತಾಲ್ಲೂಕಿನ ಕಿರುಗಾವಲು ಬೆಂಡರವಾಡಿ, ಕಲ್ಕುಣಿ, ಚಿಕ್ಕಮುಲಗೂಡು ಸೇರಿದಂತೆ ಇತರೆ ಗ್ರಾಮಗಳಲ್ಲಿ  ಪ್ರಚಾರ ನಡೆಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !